ರಾಯಚೂರು : ರಾಯಚೂರಿನಲ್ಲಿ ಹಾಡಾಗಲೇ ಭೀಕರವಾದ ಕೊಲೆಯಾಗಿದ್ದು, ಡ್ರೈಫ್ರೂಟ್ಸ್ ವ್ಯಾಪಾರಿಯನ್ನು ಅಟ್ಟಾಡಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಆಂಧ್ರಪ್ರದೇಶ ಮೂಲದ ಕಡಪ ಮೂಲದ ಇಮಾಮ್ ಹುಸೇನ್ 24 ಎನ್ನುವ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ರಾಯಚೂರಿನ ರೇಡಿಯೋ ಸ್ಟೇಷನ್ ಬಳಿ ಮತ್ತು ತಡರಾತ್ರಿ ಈ ಒಂದು ಭೀಕರ ಕೊಲೆ ನಡೆದಿದೆ. ಕರೀಂ ಎಂಬವನಿಗೆ ಗಂಭೀರವಾದ ಗಾಯಗಳಾಗಿದ್ದು ಆತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 10 ದಿನದಿಂದ ರಾಯಚೂರಿನಲ್ಲಿ ಬೀದಿಬದಿ ವ್ಯಾಪಾರ ಮಾಡುತ್ತಿದ್ದರು. ಜ್ ವೇಳೆ ನಾಲ್ವರು ಹಣ ವಸೂಲಿ ಮಾಡಲು ಬಂದಿದ್ದಾರೆ. ಅದಕ್ಕೆ ಹಣ ನೀಡಲ್ಲ ಎಂದಿದಕ್ಕೆ ಕಲ್ಲಿನಿಂದ ಜಜ್ಜಿ ಭೀಕರ ಇಮಾಮ ಹುಸೇನ್ ನನ್ನು ಕೊಲೆ ಮಾಡಿದ್ದಾರೆ. ಈ ವೇಳೆ ಕರೀಂ ಎಂಬತನಿಗೂ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ ಸದರ ಭಾಜರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








