ಬೆಂಗಳೂರು : ಬೆಂಗಳೂರಲ್ಲಿ ಅಮಾನವೀಯ ಘಟನೆ ನಡೆದಿದ್ದು, ಆಟವಾಡುತ್ತಿದ್ದ ಬಾಲಕನಿಗೆ ಕಾಲಿನಿಂದ ಒದ್ದು ಅಮಾನವೀಯ ಕೃತ್ಯ ಎಸಗಿರುವ ಘಟನೆ ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಡಿಸೆಂಬರ್ 14ನೇ ತಾರೀಕಿನಂದು ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಈ ವೇಳೆ ಹಿಂದಿನಿಂದ ಬಂದಂತಹ ವ್ಯಕ್ತಿ ಬಾಲಕನಿಗೆ ಕಾಲಿನಿಂದ ಒದ್ದಿದ್ದಾನೆ. ರಂಜಿನ್ ಎನ್ನುವಂತಹ ವ್ಯಕ್ತಿ ಬಾಲಕನಿಗೆ ಓಡಿ ಬಂದು ಓದಿದ್ದಾನೆ. ರಂಜನ್ ಓಡಿಬಂದು ಬಾಲಕನಿಗೆ ಏಕಾಏಕಿ ಒದ್ದಿದ್ದು ಆತ ಹೋಗಿ ಒಂದು ಅಡಿ ದೂರ ಬಿದ್ದಿದ್ದಾನೆ ಬಾಲಕನ ತಾಯಿ ರಂಜನ್ ವಿರುದ್ಧ ದೂರು ದಾಖಲಿಸಿದ್ದಾರೆ. ಬನಶಂಕರಿ ಠಾಣೆ ಪೊಲೀಸರು ಇದೀಗ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಇನ್ನು ಇದೇ ವಿಚಾರವಾಗಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಪ್ರತಿಕ್ರಿಯೆ ನೀಡಿದ್ದು ಮಗುವಿನ ಮೇಲೆ ಕ್ರೌರ್ಯ ಎಸಗಿದವನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸಂಬಂಧಪಟ್ಟ ಪೊಲೀಸರ ಜೊತೆಗೆ ಈ ಘಟನೆ ಕುರಿತು ಮಾತನಾಡುತ್ತೇನೆ ಈತನ ವಿರುದ್ಧ ಯಾವ ಯಾವ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡು ಆತನಿಗೆ ಶಿಕ್ಷೆ ಆಗುವಂತೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.








