ಚಾಮರಾಜನಗರ : ಇತ್ತೀಚಿಗೆ ಬೆಂಗಳೂರಿನಲ್ಲಿ ATM ವಾಹನದಲ್ಲಿ ಇದ್ದಂತ ಕೋಟ್ಯಂತರ ಹಣ ಕಳ್ಳತನ ನಡೆದಿತ್ತು. ಇದೀಗ ಆ ಪ್ರಕರಣ ಬೆನ್ನಲ್ಲೇ ಚಾಮರಾಜನಗರದಲ್ಲಿ ಸಹಕಾರ ಸಂಘದ ಕಚೇರಿ ಬೀಗ ಒಡೆದು 14.12 ಲಕ್ಷ ನಗದು ಹಣವನ್ನು ಕಳ್ಳತನ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಡುಗೂರಿನಲ್ಲಿ ಈ ಒಂದು ದರೋಡೆ ನಡೆದಿದೆ.
ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಡುಗೂರಿನಲ್ಲಿ ಇರುವಂತಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯ ಬೀಗ ಒಡೆದು 14.12 ಲಕ್ಷ ನಗದು ಹಣವನ್ನು ಖದೀಮರು ದರೋಡೆ ಮಾಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಈ ಕುರಿತು ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .








