ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಭೀಕರ ಕೊಲೆ ಪ್ರಕರಣದ ಕುರಿತು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ನಲ್ಲಿ ಟ್ರಯಲ್ ಪುನರಾರಂಭಗೊಂಡಿತು.ಈ ವೇಳೆ ಕೋರ್ಟ್ ಪವಿತ್ರಾಗೌಡ ಪರ ವಕೀಲರ ವಾದ ಆಲಿಸಿ ವಿಚಾರಣೆ ನಾಳೆಗೆ ಮುಂದೂಡಿತು.
ವಿಚಾರಣೆಯ ವೇಳೆ ರೇಣುಕಾ ಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆಗೆ ಆರೋಪಿ ಪವಿತ್ರ ಗೌಡ ಪರ ವಕೀಲ ಬಾಲನ್ ಅವರು ಪಾರ್ಟಿ ಸವಾಲು ಹಾಕಿದ್ದು, ಜೂನ್ 11ರಂದು ಪೊಲೀಸರು ವಿಚಾರಣೆ ಮಾಡಿದ್ದರ ಎಂದು ಕೇಳಿದರು ಇಲ್ಲ ಜೂನ್ 14ರಂದು ಉತ್ತರಿಸಿದ್ದೇನೆ ಎಂದು ರತ್ನಪ್ರಭಾತ ತಿಳಿಸಿದರು. 2024 ಜೂನ್ 8ರಂದು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದ ಅಪೋಲೋ ಫಾರ್ಮಸಿಗೆ ಹೋಗಿ ಕೆಲಸ ಮಾಡಿದ್ದ ಹೌದಾ ಅಂತ ಪವಿತ್ರಾ ಪರ ವಕೀಲ ಬಾಲನ್ ಕೇಳಿದಾಗ ರೇಣುಕಾ ಸ್ವಾಮಿ ತಾಯಿ ರತ್ನಪ್ರಭಾ ಅವರು ಇಲ್ಲ ಎಂದು ಉತ್ತರಿಸಿದರು.
ಶವಾಗಾರದಲ್ಲಿ ರೇಣುಕಾ ಸ್ವಾಮಿ ಧರಿಸಿದ್ದ ಟಿ ಶರ್ಟ್ ನೋಡಿದ್ದೀರಾ? ಆತ ಮನೆಯಿಂದ ಹೋಗುವಾಗ ಬೇರೆ ಶರ್ಟ್ ಹಾಕಿದ್ದ 2024 ರ ಜೂನ್ 11ರಂದು ಶರ್ಟ್ ಬಗ್ಗೆ ಪೊಲೀಸರು ವಿಚಾರಣೆ ಮಾಡಿದ್ರಾ, ಎಂದು ಕೇಳಿದಾಗ ನೀಲಿ ಜೀನ್ಸ್ ಮತ್ತು ಕೈ ಗಡಿಯಾರ ಧರಿಸಿದನ್ನು ಪೊಲೀಸರಿಗೆ ಹೇಳಿದ್ರಾ? ನಿಮ್ಮ ಮಗ ಎಲ್ಲಿ ಹೋದ ಎಂದು ಸ್ನೇಹಿತರನ್ನು ವಿವರಿಸಿದ್ದಾರಾ? ನಿಮ್ಮ ಮಗನ ಜೊತೆ ಮಧ್ಯಾಹ್ನ ಊಟ ಮಾಡಿದ್ದೇನೆ ಎಂದು ರೇಣುಕಾ ಸ್ವಾಮಿಯ ಕೆಲವು ಸ್ನೇಹಿತರು ಹೇಳಿದ್ರು ಎಂದಾಗ ಇಲ್ಲ ಅಂತ ರೇಣುಕಸ್ವಾಮಿ, ತಾಯಿ ರತ್ನಾಪ್ರಭಾ ಉತ್ತರ ನೀಡಿದ್ದಾರೆ.
ರೇಣುಕಸ್ವಾಮಿ ತಾಯಿಗೆ ಬಾಲನ್ ಅವರು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ, ಕೊಲೆಯಾದ ದಿನ ರೇಣುಕಾ ಸ್ವಾಮಿ ಏನ್ ಮಾಡಿದ್ದ? ಟಿಫನ್ ಮಾಡಿದ್ನಾ? ಯಾವ ಬಟ್ಟೆ ಧರಿಸಿದ್ದ? ಯಾವ ಬಣ್ಣದ ಶರ್ಟ್ ಹಾಕಿದ್ದ? ಕೈ ಗಡಿಯಾರ ಧರಿಸಿದ ಪೊಲೀಸರಿಗೆ ಹೇಳಿದ್ರಾ? ಎಂದು ರತ್ನಪ್ರಭಾ ಗೆ ಪವಿತ್ರ ಪರ ವಕೀಲ ಬಾಲನ್ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಜೂನ್ 9ರಂದು ನಿಮ್ಮ ಮಗ ಹೋಗಿದ್ದು ಗೊತ್ತಿತ್ತಾ? ಕೆಎಸ್ಆರ್ಟಿಸಿ ಬಸ್ ಹತ್ತಿ ಹೋಗಿದ್ದು ನಿಮಗೆ ಗೊತ್ತಿತ್ತಾ? ನಿಮ್ಮ ಮಗ ಎಲ್ಲಿ ಹೋಗಿದ್ದ ಎಂಬುದು ನಿಮಗೆ ಗೊತ್ತಿತ್ತು. ಹೀಗಾಗಿಯೇ ನೀವು ದೂರು ಕೊಟ್ಟಿಲ್ಲ ಗೊತ್ತಿರ್ಲಿಲ್ಲ ಎಂದು ರೇಣುಕಾ ಸ್ವಾಮಿ ತಾಯಿ ರತ್ನಪ್ರಭಾ ಇದೆ ವೇಳೆ ಉತ್ತರಿಸಿದರು. ಮರ ಕೆಲಸಕ್ಕೆ ಹೋಗುವಾಗ ಯೂನಿಫಾರ್ಮ್ ಹಾಕುತ್ತಿರಲಿಲ್ವಾ ಎಂದಾಗ ಶನಿವಾರ ಮಾತ್ರ ಯುನಿಫಾರ್ಮ್ ಹಾಕುತ್ತಿರಲಿಲ್ಲ ಎಂದು ರತ್ನ ಪ್ರಭ ಉತ್ತರಿಸಿದ್ದರು. ಇವಳೆ ಕೊರಳಲ್ಲಿದ್ದ ಗೋಲ್ಡ್ ಚೈನ್ ಬಗ್ಗೆ ಬಾಲನ್ ಪ್ರಶ್ನಿಸಿದರು. ಪೊಲೀಸರ ಮಾತು ಕೇಳಿ ಜೈನ ಬಗ್ಗೆ ಸುಳ್ಳು ಹೇಳಿದ್ದೀರಾ ಅಂತ ಕೇಳಿದಾಗ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಇಲ್ಲ ಅಂತ ಉತ್ತರಿಸಿದ್ದರು.








