ಬೆಳಗಾವಿ : ಇತ್ತೀಚಿಗೆ ಯುವಕರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕೃಷಿ ಮಾಡಿಕೊಂಡು ಇರುವ ಯುವಕರಿಗಂತು ಹೆಣ್ಣು ಹೆತ್ತ ಪೋಷಕರು ಹೆಣ್ಣು ಕೊಡಲ್ಲ ಅಂತ ನೇರವಾಗಿ ಹೇಳಿ ಬಿಡುತ್ತಿದ್ದಾರೆ. ಇದೀಗ ಇದೇ ವಿಚಾರವಾಗಿ ಪರಿಷತ್ ನಲ್ಲಿ ಪುಟ್ಟಣ್ಣ ಅವರು ಗ್ರಾಮೀಣ ಭಾಗದಲ್ಲಿ ಕೃಷಿ ಮಾಡುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಹಾಗಾಗಿ ಸರ್ಕಾರ ಇವರಿಗೆ ಒಂದು ಯೋಜನೆ ಜಾರಿ ಮಾಡಬೇಕು ಎಂದು ವಿಷಯ ಪ್ರಸ್ತಾಪಿಸಿದರು.
ಗ್ರಾಮೀಣ ಭಾಗದಲ್ಲಿ ಕೃಷಿ ಮಾಡುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಎಂದು ಪರಿಷತ್ ನಲ್ಲಿ ಶೂನ್ಯ ವೇಳೆ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಪ್ರಸ್ತಾಪಿಸಿದರು. ಸರ್ಕಾರ ಇಂತಹ ಯುವಕರಿಗೆ ಯೋಜನೆ ಘೋಷಣೆ ಮಾಡಬೇಕು ಹೆಣ್ಣು ಮಕ್ಕಳು ಸಿಗದೇ ತಾಲೂಕಿಗೆಂದು ಮಠ ಕಟ್ಟಿ ಕೊಡಿ ಅಂತ ಅರ್ಜಿ ಹಾಕುತ್ತಿದ್ದಾರೆ. ಮಠ ಕಟ್ಟಿ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ ಎಂದು ಅವರು ಪ್ರಸ್ತಾಪಿಸಿದರು.








