ಬೆಳಗಾವಿ ಸುವರ್ಣ ವಿಧಾನಸೌಧ: ಪರವಾನಿತ ಭೂಮಾಪಕರನ್ನು ಯಾವುದೇ ಖಾಲಿ ಹುದ್ದೆಗೆ ನೇಮಕ ಮಾಡಿಕೊಂಡಿರುವುದಿಲ್ಲ ಹಾಗೂ ಸಂಚಿತ ನಿಧಿಯಿಂದಾಗಲಿ, ಸರ್ಕಾರದ ಅನುದಾನದಿಂದಾಗಲಿ ಇವರಿಗೆ ವೇತನ ಪಾವತಿಸಿರುವುದಿಲ್ಲ, ಖಾಸಗಿ ಭೂಮಾಪಕರನ್ನು ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಭರ್ತಿ ಮಾಡಲು ಅವಕಾಶವಿರುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಸದಸ್ಯ ಶಿವಕುಮಾರ್ ಕೆ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು.
ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ‘ಖಾಸಗಿ ಭೂ ಮಾಪಕರ ಸೇವೆ’ ಗೆ ಅವಕಾಶವಿದ್ದು ಕಳೆದ ಹಲವು ದಶಕಗಳಿಂದ ಖಾಸಗಿ ಭೂಮಾಪಕರು ಅಧಿಕೃತವಾಗಿ ಭೂದಾಖಲೆಗಳ ಹಾಗೂ ಭೂಮಾಪನ ಇಲಾಖೆಯ ನಿಯಮಗಳಿಗುಣವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾಜ್ಯದ ಭೂದಾಖಲೆಗಳ ಹಾಗೂ ಭೂಮಾಪನ ಇಲಾಖೆಯಲ್ಲಿ ಖಾಲಿ ಇರುವ ಸರ್ಕಾರಿ ಭೂಮಾಪಕರ ಹುದ್ದೆಗಳನ್ನು ‘ಒಂದು ಬಾರಿಯ ವಿಶೇಷ ನೇಮಕಾತಿ” ಉಪಕ್ರಮದಲ್ಲಿ ಸೇವಾನುಭವದ ಆಧಾರದಲ್ಲಿ ಖಾಸಗಿ ಭೂಮಾಪಕರನ್ನು ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಭರ್ತಿ ಮಾಡುವ ಸಂಬಂಧ ಇಲಾಖಾ ಮಟ್ಟದಲ್ಲಿ ಹಾಗೂ ಸಚಿವರ ಹಂತದಲ್ಲಿ ನಡೆದ ಸಭೆಯಲ್ಲಿ ಸೇವಾ ಭದ್ರತೆಯನ್ನು ಒದಗಿಸಲು ಅಥವಾ ಸೇವೆಯನ್ನು ಸರ್ಕಾರಿ ಕೆಲಸಕ್ಕೆ ಸಕ್ರಮಗೊಳಿಸಲು ನಿಯಮಗಳಲ್ಲಿ ಅವಕಾಶವಿಲ್ಲವೆಂದು ಅಭಿಪ್ರಾಯವ್ಯಕ್ತವಾಗಿದೆ. ಪರವಾನಿತ ಭೂಮಾಪಕರು ಖಾಲಿ ಇರುವ ಮಂಜೂರಾದ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿರುವುದಿಲ್ಲ. ಇವರುಗಳಿಗೆ ಸೇವೆಯಲ್ಲಿ ಸಕ್ರಮಗೊಳಿಸುವುದು, ವಯೋಮಿತಿ ಸಡಿಲಿಕೆ, ಸೇವಾ ಭದ್ರತೆ ನೀಡುವುದು, ಕನಿಷ್ಠ ವೇತನ ನಿಗದಿಪಡಿಸುವುದಕ್ಕಾಗಲಿ ಅವಕಾಶವಿಲ್ಲವೆಂದು ಹಾಗೂ ನ್ಯಾಯಾಲಯದ ವ್ಯಾಪ್ತಿಯಲ್ಲಿ ನಿರ್ಧರಿಸಿರುವ ಆದೇಶಗಳನ್ನು ಪ್ರಸ್ತಾಪಿಸಿ ಈ ವಿಷಯವು ಈಗಾಗಲೇ ಅತಿ ಸ್ಪಷ್ಟವಾಗಿದ್ದು, ಇದಕ್ಕೆ ವ್ಯತಿರಿಕ್ತವಾಗಿ ನಡೆಯಲು ಸಾಧ್ಯವಿರುವುದಿಲ್ಲ ಎಂದು ತಿಳಿಸಿದರು.
ಪರವಾನಗಿ ಭೂಮಾಪಕರುಗಳನ್ನು ಖಾಯಂಗೊಳಿಸುವ ಕುರಿತು ಕೆ.ಎ.ಟಿಯಲ್ಲಿ ಅರ್ಜಿ ದಾಖಲಿಸಲಾಗಿರುತ್ತದೆ. ಈ ಸಂಬಂಧ ಅಡ್ವಕೇಟ್ ಜನರಲ್‍ರವರು ಪರವಾನಗಿ ಭೂಮಾಪಕರು ಸರ್ಕಾರಿ ಭೂಮಾಪಕರು ಅಲ್ಲವೆಂದು ಹಾಗೂ ಸರ್ಕಾರದಿಂದ ಈ ಬಗ್ಗೆ ಯಾವುದೇ ಭರವಸೆ ನೀಡಿರುವುದಿಲ್ಲ ಎಂದೂ, ಹಾಗೂ ಪರವಾನಗಿ ಭೂಮಾಪಕರು ಚಿಜ-hoಛಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವುದಿಲ್ಲವೆಂದು ಹಾಗೂ ಇವರಿಗೆ ಸೇವಾ ನಿಯಮಗಳು ಅನ್ವಯವಾಗುವುದಿಲ್ಲವಾದರಿಂದ ಇವರುಗಳನ್ನು ನೇಮಕಾತಿಗೆ ಪರಿಗಣಿಸಲು ಸಾಧ್ಯವಿಲ್ಲವೆಂದು ತಿಳಿಸಿದ್ದರ ಮೇರೆಗೆ, ಸದರಿ ಪ್ರಕರಣವನ್ನು ನ್ಯಾಯಾಲಯವು ವಜಾಗೊಳಿಸಿ ಆದೇಶಿಸಿರುತ್ತದೆ.
ಪರವಾನಗಿ ಭೂಮಾಪಕರನ್ನು ಭೂಮಾಪನ ಇಲಾಖೆಯಲ್ಲಿ ವಿಲೀನಗೊಳಿಸುವ ಕುರಿತಂತೆ ಭೂಮಾಪನ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ದಿನಗೂಲಿ ಆಧಾರದ ಮೇಲೆ ನೇಮಕಗೊಂಡು 10 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿ ಸರ್ಕಾರದಿಂದ ವೇತನ ಭತ್ಯೆಗಳನ್ನು ಪಡೆದಿದ್ದಲ್ಲಿ ಮಾತ್ರ ಸೇವೆಯಲ್ಲಿ ವಿಲೀನಗೊಳಿಸಲು ಅವಕಾಶವಿರುತ್ತದೆ. ಆದರೆ ಪರವಾನಗಿ ಭೂಮಾಪಕರನ್ನು ಯಾವುದೇ ಖಾಲಿ ಹುದ್ದೆಗೆ ನೇಮಕ ಮಾಡಿಕೊಂಡಿರುವುದಿಲ್ಲ. ಹಾಗೂ ಸಂಚಿತ ನಿಧಿಯಿಂದಾಗಲಿ ಅಥವಾ ಸರ್ಕಾರದ ಅನುದಾನದಿಂದಾಗಲಿ ಇವರಿಗೆ ವೇತನ ಪಾವತಿಸಿರುವುದಿಲ್ಲ. ಅರ್ಜಿದಾರರಿಂದ ಸ್ವೀಕೃತವಾಗುವ ಶುಲ್ಕದಲ್ಲಿ ಕಾಲಕಾಲಕ್ಕೆ ನಿಗಧಿಪಡಿಸಿದ ಮೊತ್ತವನ್ನು ಪಾವತಿಸಲಾಗುತ್ತಿದೆ. ಪರವಾನಗಿ ನೀಡುವಾಗ ಇದು ಯಾವುದೇ ಸರ್ಕಾರಿ ಸೇವೆಗೆ ಪೂರಕವಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ ಶ್ರೀಮತಿ ಉಮಾದೇವಿ ಪ್ರಕರಣದನ್ವಯ ಪರವಾನಗಿ ಭೂಮಾಪಕರನ್ನು ಸಕ್ರಮಗೊಳಿಸಲು ಅವಕಾಶವಿರುವುದಿಲ್ಲವೆಂದು ಸ್ಪಷ್ಟಪಡಿಸಿ ಹಿಂಬರಹ ನೀಡಲು ನಿರ್ದೇಶಿಸಲಾಗಿದೆ ಎಂದರು.
ಬೆಳಗಾವಿ ಸುವರ್ಣಸೌಧದ ವಿಧಾನಸಭೆಯಲ್ಲಿ ಮಹತ್ವದ ನಾಲ್ಕು ತಿದ್ದುಪಡಿ ವಿಧೇಯಕ ಮಂಡನೆ
ಐಪಿಎಲ್ 2026 ಹರಾಜು: ಹೀಗಿದೆ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ | IPL 2026 Auction








