ಕೊಡಗು : ಕಳೆದ ಕೆಲವು ದಿನಗಳ ಹಿಂದೆ ಚಾಮರಾಜ ನಗರದಲ್ಲಿ ವಿಷ ಹಾಕಿ ಐದು ಹುಲಿಗಳನ್ನು ಕೊಲೆ ಮಾಡಲಾಗಿತ್ತು. ಇದೀಗ ಕೊಡಗಿನಲ್ಲಿ ಉರುಳಿಗೆ ಸಿಲುಕಿ ಹುಲಿಯೊಂದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶ್ರೀಮಂಗಳ ಗ್ರಾಮದಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಕುಶಾಲನಗರದ ಚಟ್ಟಳ್ಳಿ ಬಳಿಯ ಶ್ರೀಮಂಗಳ ತೋಟದ ಬೇಲಿಗೆ ಉರುಳು ಹಾಕಿದ್ದ ದುಷ್ಕರ್ಮಿಗಳು. ಈ ವೇಳೆ ಗಂಡು ಹುಲಿ, ಉರುಳಿಗೆ ಸಿಲುಕಿ ಸಾವನ್ನಪ್ಪಿದೆ. ಕೆಚ್ಚಿಟ್ಟಿರ ಅಪ್ಪಯ್ಯ ತೋಟದಲ್ಲಿ ಒಂದು ಘಟನೆ ಸಂಭವಿಸಿದೆ ಉರುಳಿಗೆ ಸಿಲುಕಿ ನರಳಾಡಿ ಗಂಡು ಹುಲಿ ಪ್ರಾಣ ಬಿಟ್ಟಿದೆ.ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








