ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚಾ ಪ್ರದರ್ಶಿಸುವವರ ಸಂಖ್ಯೆ ಹೆಚ್ಚಾಗಿದೆ. ನೀವು ಸೋಷಿಯಲ್ ಮೀಡಿಯಾ ಸ್ಟಾರ್ ಆಗಬೇಕು ಎನ್ನುವ ಹುಚ್ಚಿಗೆ ಬಿದ್ದು, ತಲ್ವಾರ್ ಹಿಡಿದು ರೀಲ್ಸ್ ಮಾಡೋಕೆಲ್ಲ ಹೋಗಬೇಡಿ. ಅಂತ ಸಾಹಸಕ್ಕೆ ಕೈ ಹಾಕೋ ಮುನ್ನ ಎಚ್ಚರ. ಯಾಕೆ ಅಂತ ಮುಂದೆ ಓದಿ.
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿದ್ದಂತ ಆ ಇಬ್ಬರು, ಆ ವೀಡಿಯೋ ರೀಲ್ಸ್ ಗೆ ಹಾಕಿದ್ದರು. ಅವರು ಹಾಕಿದ್ದಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜೊತೆ ಜೊತೆಗೆ ಪೊಲೀಸರ ಕಣ್ಣಿಗೂ ಬಿದ್ದಿತ್ತು. ಈ ಸಂಬಂಧ ದಾಖಲಾದಂತ ಪ್ರಕರಣದಲ್ಲಿ ಮಂಗಳೂರಿನ ಬಂದರು ನಿವಾಸಿ ಅಮೀರ್ ಸುಹೇಲ್ ಹಾಗೂ ಕಾವೂರು ನಿವಾಸಿ ಸುರೇಶ್ ಎಂಬಾತನನ್ನು ಬಂಧಿಸಲಾಗಿದೆ.
ಡಿಸೆಂಬರ್.13ರಂದು ಅಮೀರ್ ಸುಹೇಲ್ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ, ತಾನಿರುವಂತ ಸೋಷಿಯಲ್ ಮೀಡಿಯಾದಲ್ಲಿ ಆ ವೀಡಿಯೋ ಹಾಕಿದ್ದನು. ಇದೇ ವೀಡಿಯೋಗೆ ಕಾವೂರು ನಿವಾಸಿ ಸುರೇಶ್ ಲೈಕ್ ಮಾಡಿದ್ದಲ್ಲದೇ, ಶೇರ್ ಕೂಡ ಮಾಡಿದ್ದನು. ಹೀಗಾಗಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತ ರೀಲ್ಸ್ ಹಾಕಿದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.
ಬಂಧಿತ ಇಬ್ಬರು ಆರೋಪಿಗಳ ವಿರುದ್ಧ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 352(2), 4, 25(ಬಿ) ಅಲ್ಲದೇ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, ಕಲಂ 66 ಐಟಿ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಾಗಿದೆ. ಅಲ್ಲದೇ ತಲ್ವಾರ್ ಹಿಡಿದು ರೀಲ್ಸ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಂತ ಮೊಬೈಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣಾ ಪ್ರಕ್ರಿಯೆ ಮುಂದುವರೆಸಿ: ಡಿಆರ್ ಗೆ ಮನವಿ
BIG NEWS: ರಾಜ್ಯದ 84 ತಾಲ್ಲೂಕುಗಳಿಗೆ ‘ತಾಲ್ಲೂಕು ವೈದ್ಯಾಧಿಕಾರಿ’ ನೇಮಿಸಿ ಸರ್ಕಾರ ಆದೇಶ: ಇಲ್ಲಿದೆ ಪಟ್ಟಿ








