ಬೆಂಗಳೂರು : ಗ್ರಾಮ ಪಂಚಾಯಿತಿಯು ಗ್ರಾಮ ಮಟ್ಟದ ಸ್ಥಳೀಯ ಆಡಳಿತ ಸಂಸ್ಥೆಯಾಗಿದ್ದು, ಗ್ರಾಮಸ್ಥರಿಂದ ಚುನಾಯಿತರಾದ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಈ ಸಂಸ್ಥೆಯು ಗ್ರಾಮಗಳ ಅಭಿವೃದ್ಧಿ, ಮೂಲಸೌಕರ್ಯಗಳ ನಿರ್ವಹಣೆ (ರಸ್ತೆ, ನೀರು, ದೀಪ), ತೆರಿಗೆ ವಸೂಲಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಜಾರಿಯಂತಹ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ.
ಗ್ರಾಮ ಪಂಚಾಯಿತಿಯಿಂದ ಈ ಕೆಳಕಂಡ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಬಹುದಾಗಿದೆ.
1. ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಅನುದಾನದ ವಿವರಗಳು.
2. ಗ್ರಾಮ ಪಂಚಾಯತ್ ವೆಚ್ಚ
3. ಗ್ರಾಮ ಪಂಚಾಯತಿ ಡಿ.ಸಿ.ಬಿ. ತನ್ನ ವಿವರಗಳು (ಬೇಡಿಕ, ವಸೂಲಿ ಮತ್ತು ಬಾಕಿ)
4. ಮನೆ ಖಾತೆ ಉದ್ಯತ ಭಾಗ, ಡಿಮ್ಯಾಂಡ್ ಉದ್ಯತ ಭಾಗ, ಲೈಸೆನ್ಸ್, ಮೂಟೇಶನ್ ಇತ್ಯಾದಿ ಪತ್ರಗಳು
5. ಗ್ರಾಮ ಪಂಚಾಯತಿ ಜಮಾ ಮತ್ತು ಖರ್ಚಿನ ವಿವರಗಳು (ನಮೂನೆ-9ರಲ್ಲಿ)
6. ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಹಾಗೂ ಸ್ನಾಯಿ ಸಮಿತಿಗಳ ನಡವಳಿಗಳು
7. ಗ್ರಾಮ ಪಂಚಾಯತಿ ಸಭಾ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು
8. ಗ್ರಾಮ ಸಭೆ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು
9. ಗ್ರಾಮ ಪಂಚಾಯತಿ ಆಸ್ತಿಗಳ ವಿವರಗಳು
10. ಸಿಬ್ಬಂದಿ ವಿವರಗಳು
11. ಆಡಿಟ್ ವರದಿಗಳ ಮೇಲಿನ ಅನುಪಾಲನಾ ವರದಿ
12. ಗ್ರಾಮ ಪಂಚಾಯತಿ ಸ್ವತ್ತಿನ ಹರಾಜು, ಗುತ್ತಿಗೆ, ಮಾರಾಟ ಇತ್ಯಾದಿಗಳ ವಿವರಗಳು
13. ಕಾಮಗಾರಿಗಳ ಕ್ರಿಯಾ ಯೋಜನೆಗಳು (ಅಂದಾಜು ವೆಚ್ಚ, ಕಾಮಗಾರಿಗಳ ಸ್ಥಳ ವಿವರಗಳನ್ನೊಳಗೊಂಡಂತೆ)
14. ಗ್ರಾಮ ಪಂಚಾಯತಿ ಪ್ರಕಾರ್ಯಗಳ ಬಗ್ಗೆ ಮಾಹಿತಿ
15. ಗ್ರಾಮ ಪಂಚಾಯತಿ ದಾಸ್ತಾನು ನಿರ್ವಹಣೆ/ವಿತರಣೆ ವಿವರಗಳು
16. ಗ್ರಾಮ ಪಂಚಾಯತಿ ಲೆಕ್ಕ ಪತ್ರ ನಿಯಮಗಳ ವಿವರಗಳು (ವಿವಿಧ ಖರೀದಿ ನಿಯಮಗಳಿಗೆ ಅನುಸರಿಸಬೇಕಾದ ರೀತಿಗಳು ಸೇರಿದಂತೆ)
17. ಗ್ರಾಮ ಪಂಚಾಯಿತಿ ಮನೆ ಕಂದಾಯ, ನಿವೇಶನ ಶುಲ್ಕ, ನೀರಿನ ಕಂದಾಯ, ಸೆಸ್ ಇತ್ಯಾದಿಗಳನ್ನು ನಿರ್ಧರಿಸಿದ ವಿಧಿ ವಿಧಾನಗಳು
18. ಗ್ರಾಮ ಪಂಚಾಯತಿ ಕುಡಿಯುವ ನೀರು ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ನೈರ್ಮಲೀಕರಣಕ್ಕೆ ಮಾಡಿದ ವೆಚ್ಚದ ವಿವರಗಳು
19. ವಿವಿಧ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿ
20. ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿ
21. ಗ್ರಾಮ ಪಂಚಾಯಿತಿ ಮೂಲ ಅಂಕಿ ಅಂಶಗಳ ವಿವರಗಳು
23. ಗ್ರಾಮ ಪಂಚಾಯತಿ ವತಿಯಿಂದ ಸಾಲ ಮಾಡಿದ ದೇಣಿಗೆ ಪಡೆದ ವಿವರಗಳು
24. ಗ್ರಾಮ ಪಂಚಾಯತ್ ಕುಲವಾರ್ ಬಾಕಿ ಪಟ್ಟಿ,
25. ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿ (ಬಿ.ಪಿ.ಎಲ್.ಪಟಿ)
26. ಜನನ ಮರಣ ಮಾಹಿತಿ (ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗೆ)
27. ಸರ್ಕಾರದಿಂದ ಬಂದ ವಿವಿಧ ಸುತ್ತೋಲೆಗಳು, ಆದೇಶ ಪ್ರತಿಗಳು
28. ಶೇ.18 ರ ಪ.ಜಾ/ಪ.ಪಂ.ಗಳ ಅಭಿವೃದ್ಧಿಗೆ ತೆಗೆದುಕೊಂಡ ಕಾರ್ಯಕ್ರಮಗಳ ಮಾಹಿತಿ
29. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಮಾಹಿತಿ
30. ಗ್ರಾಮ ಪಂಚಾಯತಿ ಸದಸ್ಯರುಗಳ ವಿವರಗಳು
I. ತಾಲ್ಲೂಕು ಪಂಚಾಯತಿ ವತಿಯಿಂದ ಈ ಕೆಳಕಂಡ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಬಹುದಾಗಿದೆ.
1) ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆ/ಸ್ನಾಯಿ ಸಮಿತಿಗಳ ಸಭೆ/ಕೆಡಿಪಿ ಸಭೆಗಳ ನಡವಳಿಗಳು/ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು
2) ವಾರ್ಷಿಕ ಆಡಳಿತ ವರದಿ
3) ತಾಲ್ಲೂಕು ಪಂಚಾಯಿತಿಗೆ ಬಿಡುಗಡೆಯಾದ ಅನುದಾನದ ವಿವರಗಳು
4) ತಾಲ್ಲೂಕು ಪಂಚಾಯತಿ ಖರ್ಚಿನ ವಿವರಗಳು(ಯೋಜನಾವಾರು)
5) ವಿವಿಧ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿ
6) ಫಲಾನುಭವಿಗಳನ್ನು ಆಯ್ಕೆ ಮಾಡಲು ಅನುಸರಿಸಿದ ವಿಧಿ ವಿಧಾನಗಳ ವಿವರಗಳು
7) ಸಿಬ್ಬಂದಿ ವಿವರಗಳು
8) ತಾಲ್ಲೂಕು ಪಂಚಾಯತಿ ಆಸ್ತಿಗಳ ವಿವರಗಳು
9) ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯಿತಿ ವತಿಯಿಂದ ಹೊರಡಿಸಿದ ಸುತ್ತೋಲೆಗಳು, ಆದೇಶಗಳು, ಪ್ರಸ್ತಾವನೆ, ವರದಿ, ಆಡಿಟ್ ವರದಿಗಳ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ.
10) ತಾಲ್ಲೂಕು ಪಂಚಾಯಿತಿ ಆಡಿಟ್ ವರದಿಯ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ.
11) ಕೇಂದ್ರ / ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ
12) ತಾಲ್ಲೂಕಿನ ಅಂಕಿ ಅಂಶಗಳ ಬಗ್ಗೆ,
13) ಕುಡಿಯುವ ನೀರಿನ ಯೋಜನೆಯ ಮೇಲ್ವಿಚಾರಣೆ ಹಾಗೂ ವೆಚ್ಚದ ವಿವರಗಳು ದಾಸ್ತಾನು ಹಾಗೂ ವಿತರಣಾ ವಹಿಗಳ ಮಾಹಿತಿ
14) ದಾಸ್ತಾನು ಹಾಗೂ ವಿತರಣಾ ವಹಿಗಳ ಮಾಹಿತಿ
15) ತಾಲ್ಲೂಕು ಪಂಚಾಯಿತಿ ಮಾಡಿರುವ ಸಾಲ, ವಡದ ದೇಣಿಗೆ ಇತ್ಯಾದಿಗಳ ವಿವರಗಳು
16) ತಾಲ್ಲೂಕು ವಂಚಾಯಿತಿ ಸಾಮಾನ್ಯ ಪ್ರಕಾರ್ಯಗಳ ಬಗ್ಗೆ.
17) ತಾಲ್ಲೂಕು ವಂಚಾಯಿತಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ತಪಾಸಣಾ ವರದಿ
19) ಸರ್ಕಾರದಿಂದ/ಜಿಲ್ಲಾ ಪಂಚಾಯಿತಿ ವತಿಯಿಂದ ಬಂದ ವಿವಿಧ ಸುತ್ತೋಲೆಗಳು, ಆದೇಶಗಳು, ಮಾರ್ಗಸೂಚಿಗಳ ಪ್ರತಿಗಳು
20) ಶೇ.20 ರಲ್ಲಿ ತೆಗೆದುಕೊಂಡ ಕ್ರಮಗಳ ವಿವರಗಳು
21) ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆಯಡಿ ತೆಗೆದುಕೊಂಡ ಕ್ರಮಗಳ ಮಾಹಿತಿ
22) ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮ ಮತ್ತು ಖರ್ಚಿನ ವಿವರಗಳು
23) ಸಾರ್ವಜನಿಕ ಸಹಯೋಗದೊಂದಿಗೆ ಕೈಗೊಂಡ ಕಾರ್ಯಕ್ರಮಗಳ ಮಾಹಿತಿ
24) ವಿವಿಧ ಯೋಜನೆಗಳ ಕ್ರಿಯಾ ಯೋಜನೆಗಳ ಪ್ರತಿ
25) ಸಮಗ್ರ ಇಂಧನ ಶಕ್ತಿ ಕಾರ್ಯಕ್ರಮಗಳ ಫಲಾನುಭವಿಗಳ ಪಟ್ಟಿ
26) ತಾಲ್ಲೂಕು ಪಂಚಾಯಿತಿ ಸದಸ್ಯರ ವಿವರ
27) ಜಮಾಬಂದಿ ವರದಿಯ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ ವಿವರಗಳು
28) ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಕರೆಯಲಾದ ಟೆಂಡರುಗಳ ಪ್ರಕಟಣೆ, ಅಂಗೀಕಾರ ಇತ್ಯಾದಿಗಳ ವಿವರಗಳು
29) ಕಾಮಗಾರಿಗಳ ಅಂದಾಜು ಪ್ರತಿಗಳು ಹಾಗೂ ಮಂಜೂರಾತಿ ಆದೇಶಗಳು
30) ತಾಲ್ಲೂಕು ಪಂಚಾಯಿತಿ ವತಿಯಿಂದ ರಚಿಸಲಾದ ಉಪ ನಿಯಮಗಳ ಪ್ರತಿಗಳು, ವಾರ್ಷಿಕ ಆಡಳಿತ ವರದಿ









