ಬೆಂಗಳೂರು : ಯತೀಂದ್ರಗೆ ಕಾಮನ್ ಸೆನ್ಸ್ ಇಲ್ಲ ಎಂದು ಬಾಲಕೃಷ್ಣ ಹೇಳಿದ್ದಾರೆ. ಸಿದ್ದರಾಮಯ್ಯಗೆ ಗೌರವವಿದ್ದರೆ ರಾಜಕೀಯ ಬಿಟ್ಟು ಮನೆಗೆ ಹೋಗಲಿ. ಸಿದ್ದರಾಮಯ್ಯ ಪುತ್ರನಿಗೆ ಈ ರೀತಿ ಟೀಕೆ ಮಾಡುತ್ತಾರೆ ಅಂದರೆ ಹೇಗೆ? ಸಿದ್ದರಾಮಯ್ಯ ಗೌರವಯುತವಾಗಿ ರಾಜೀನಾಮೆ ಕೊಟ್ಟು ಹೋಗಲಿ ನಾಯಕತ್ವ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿದ್ದು ಸುಮ್ಮನೆ ನೆಪ ಮಾತ್ರಕ್ಕೆ ವೋಟ್ ಚೋರಿ ಅಭಿಯಾನಕ್ಕೆ ಹೋಗಿದ್ದಾರೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಹೋಗಿರುವುದು ಎಂದು ಆರ್ ಅಶೋಕ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತಗಳ್ಳತನ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಚುನಾವಣೆ ಗೆದ್ದಾಗ ಮಾತ್ರ ವೋಟಿಂಗ್ ಮಷೀನ್ ಸರಿಯಿರುತ್ತದೆ ಕಾಂಗ್ರೆಸ್ ನಾಯಕರೇ ಈ ದೇಶವನ್ನು ೬೦೭೦ ವರ್ಷ ಆಳಿದ್ದಾರೆ ಚುನಾವಣೆಯಲ್ಲಿ ಸೋತಾಗ ಮಾತ್ರ ಔಟಿಂಗ್ ಮಷೀನ್ ಸರಿ ಇಲ್ವಾ ಉತ್ತರ ಪ್ರದೇಶದಲ್ಲಿ ಎಸ್ ಪಿ ಪಕ್ಷವೇ ಹೆಚ್ಚು ಸ್ಥಾನವನ್ನು ಗೆದ್ದಿದೆ ಸತತ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದೆ.
ಮತಗಳ್ಳತನ ಆರೋಪ ಮಾಡಿ ತಪ್ಪು ಸಂದೇಶ ನೀಡುತ್ತಿದ್ದಾರೆ. ಮತಗಳ್ಳತನದಲ್ಲಿ ಕಾಂಗ್ರೆಸ್ ನಂಬರ್ ಒನ್ ಇದು ನಾಟಕ ಅಷ್ಟೇ. ಇನ್ನು ಆಳಂದ ಕ್ಷೇತ್ರದ ಮತಗಳ ದಿನದ ಬಗ್ಗೆ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿ ಕೆ ಮಾಡಿರುವ ವಿಚಾರವಾಗಿ ಯಾರೂ ತಪ್ಪು ಮಾಡಿದ್ದರು ಅವರಿಗೆ ಶಿಕ್ಷೆ ಆಗುತ್ತದೆ ಮಾಲೂರಿನಲ್ಲಿ ಚುನಾವಣೆ ಅಕ್ರಮವಾಗಿತ್ತು ಅಲ್ಲಿ ಯಾರು ಮಾಡಿದ್ದರು ಕಾಂಗ್ರೆಸ್ ನಾಯಕರು ಕೇವಲ ಪಿಕ್ನಿಕ್ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಡಿಸಿಎಂ ಗುದ್ದಾಟದಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ. ಡಿಕೆ ಶಿವಕುಮಾರ್ ಈಗಲೇ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಸಿದ್ದರಾಮಯ್ಯ ಇನ್ನೂ ಎರಡು ವರ್ಷ ಬಿಡಲ್ಲ ಅಂತ ಹೇಳುತ್ತಿದ್ದಾರೆ. ಇವರಿಬ್ಬರ ಗುದ್ದಾಟದಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ. ದೆಹಲಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಟಿಕ್ಕಾಣಿ ಹೂಡಿರುವ ವಿಚಾರವಾಗಿ ಸಿದ್ದರಾಮಯ್ಯ ಬಿಡಲ ಅಂದಿದ್ದಾರೆ ಈಗ ಕಿತ್ತುಕೊಳ್ಳಬೇಕು ಅಷ್ಟೇ. ಇಡೀ ಕಾಂಗ್ರೆಸ್ ಪಕ್ಷ ಮುಳುಗಿಹೋಗಿದೆ. ರಾಜ್ಯ ಸರ್ಕಾರದ ಸಚಿವರು ಅಸೆಂಬ್ಲಿಯಲ್ಲಿ ಸುಳ್ಳು ಹೇಳುತ್ತಿದ್ದಾರೆ. ಲಕ್ಷ್ಮಿ ಸುಳ್ಳು ಹೇಳಿದ್ದಾರೆ ಯಾವ ಮಂತ್ರಿಗೂ ಆಸಕ್ತಿ ಇಲ್ಲ ಎಂದರು.








