ಬೆಂಗಳೂರು : ರಾಜ್ಯದ ಜನತೆಗೆ ಬಹುಮುಖ್ಯ ಮಾಹಿತಿ ಇಲ್ಲಿದೆ. ಕಂದಾಯ ಇಲಾಖೆಯಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಹಲವು ಪಿಂಚಣಿ ಸೌಲಭ್ಯಗಳು ಸಿಗಲಿವೆ. ಕಂದಾಯ ಇಲಾಖೆಯಿಂದ ಸಿಗುವ ಸೇವೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ವೃದ್ಧಾಪ್ಯ ವೇತನ
ಬಡತನ ರೇಖೆಗಿಂತ ಕೆಳಲರುವ ಸಂಕಷ್ಟದಲ್ಲಿರುವ ಹಿರಿಯ ನಾಗರೀಕರಿಗೆ ನೆರವು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವುದು
ಅರ್ಹತೆ : ಯೋಜನೆ ಸೌಲಭ್ಯ ಪಡೆಯಲು ಫಲಾನುಭವಿಗಳಿಗೆ ಇರಬೇಕಾದ ಅರ್ಹತೆ
60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಟುಂಬದ ಆದಾಯ ರೂ. 32,000/-ಗಳಿಗಿಂತ ಕಡಿಮೆ ಇರಬೇಕು. (ಪರಿಷ್ಕೃತ ವಾರ್ಷಿಕ ಆದಾಯ ಮಿತಿ ದಿನಾಂಕ: 10.02.2021 )
ಸಲ್ಲಿಸಬೇಕಾದ ದಾಖಲೆಗಳು
ಆಧಾರ್‌ಕಾರ್ಡ್ ಪ್ರತಿ
ವಯಸ್ಸಿನ ದೃಢೀಕೃತ ದಾಖಲೆ
ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ ದಾಖಲೆ
ಬ್ಯಾಂಕ್/ಅಂಚೆ ಖಾತೆ ಪ್ರತಿ
ವಿಧವಾ ವೇತನ
ಯೋಜನೆಯ ಉದ್ದೇಶ : ನಿರ್ಗತಿಕ ವಿಧವೆಯರಿಗೆ ಆರ್ಥಿಕ ಸಹಾಯ ಒದಗಿಸುವುದು
ಅರ್ಹತೆ
18 ವರ್ಷ ಮೇಲ್ಪಟ್ಟ ವಿಧವೆಯರು
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಟುಂಬದ ಆದಾಯ ರೂ. 32,000/-ಗಳಿಗಿಂತ ಕಡಿಮೆ ಇರಬೇಕು. (ಪಲಷ್ಕೃತ ವಾರ್ಷಿಕ ಆದಾಯ ಮಿತಿ ದಿನಾಂಕ: 10.02.2021)
ದಾಖಲೆಗಳು
ಅಧಾರ್‌ಕಾರ್ಡ್ ಪ್ರತಿ
ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ ದಾಖಲೆ
ಪತಿಯ ಮರಣ ದೃಢೀಕರಣ ಪತ್ರ/ಸ್ವಯಂ ದೃಢೀಕರಣ ಪತ್ರ
ಬ್ಯಾಂಕ್/ಅಂಚೆ ಖಾತೆ ಪ್ರತಿ









