ಬೆಂಗಳೂರು : ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 12ರ ಶೋ ಭರ್ಜರಿಯಾಗಿ ಪ್ರದರ್ಶನ ಆಗುತ್ತಿದ್ದು ಈ ಒಂದು ಬಿಗ್ ಬಾಸ್ ಫಿನಾಲೆಯಲ್ಲಿ ಯಾರು ರಣರಪ್ಪ ಆಗುತ್ತಾರೋ ಅವರಿಗೆ 2ಲಕ್ಷ ರೂಪಾಯಿ ನೀಡುತ್ತೇನೆ ಎಂದು ಬಿಗ್ ಬಾಸ್ ಸೀಸನ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಮಾಡಿದ್ದಾರೆ.
ಹೌದು ಹಳ್ಳಿಕಾರ್ ಸಂತೋಷ್ ಎಂದೇ ಹೆಸರು ಪಡೆದಿರುವ ವರ್ತೂರ್ ಸಂತೋಷ್, ರನ್ನರ್ ಅಪ್ ಗಳಿಗೆ 10 ಲಕ್ಷ ನೀಡ್ತೇನೆ, ಆದ್ರೆ ನನ್ನದೊಂದು ಷರತ್ತಿದೆ ಎಂದ್ದಿದ್ದರು. ಹಳ್ಳಿಕಾರ್ ಎತ್ತುಗಳಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ನೀಡ್ಬೇಕು, ಇಡೀ ರಾಜ್ಯಕ್ಕೆ ಹಳ್ಳಿಕಾರ್ ಎತ್ತುಗಳನ್ನು ಪರಿಚಯಿಸಬೇಕು ಎಂದಿದ್ದರು.
ಈ ಮಧ್ಯೆ ಕಲರ್ಸ್ ಕನ್ನಡ ಬಿಗ್ ಬಾಸ್ ಮನೆಗೆ ಹಳ್ಳಿಕಾರ್ ಎತ್ತುಗಳ ಪ್ರವೇಶಕ್ಕೆ ಒಪ್ಪಿಗೆ ನೀಡಿಲ್ಲ. ಇದೇ ಕಾರಣಕ್ಕೆ ವರ್ತೂರ್ ಸಂತೋಷ್ ತಮ್ಮ ನಿರ್ಧಾರ ಬದಲಿಸಿದ್ದಾರೆ. ರನ್ನರ್ ಅಪ್ ಗೆ ನೀಡುವ ಹಣದ ಬಗ್ಗೆ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಹಳ್ಳಿಕಾರ್ ಎತ್ತುಗಳಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ಇಲ್ಲ ಎನ್ನುವ ಸ್ಪಷ್ಟನೆ ಸಿಕ್ಕಿದೆ. ಆದ್ರೆ ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ. ಈ ಬಾರಿ ರನ್ನರ್ ಅಪ್ ಗೆ 2 ಲಕ್ಷ ನೀಡ್ತೇನೆ ಎಂದು ವರ್ತೂರ್ ಸಂತೋಷ್ ಸ್ಪಷ್ಟನೆ ನೀಡಿದ್ದಾರೆ.








