ಮಂಡ್ಯ: ರಾಜ್ಯ ಸರಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಗೆ ಮಂಡ್ಯ ಜಿಲ್ಲೆಯಲ್ಲಿ 12 ಆಸ್ಪತ್ರೆಗಳು ಸೇರ್ಪಡೆಯಾಗಲು ಕ್ರಮ ಕೈಗೊಳ್ಳಬೇಕು. ಈ ಯೋಜನೆಗೆ ಸ್ವಯಂ ಪ್ರೇರಣೆಯಿಂದ ಒಳಪಡಬೇಕೆಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.
ಅವರು (ಡಿ.12) ದಿನ ಜಿಲ್ಲಾಧಿಕಾರಿಗಳ ಕಚೇರಿಯ ನಗರದ ಪ್ರಮುಖ ಆಸ್ಪತ್ರೆಗಳ ವೈದ್ಯರ ಹಾಗೂ ಮುಖ್ಯಸ್ಥರ, ಪ್ರತಿನಿಧಿಗಳ ಸಭೆ ಜರುಗಿಸಿ, ಮಾತನಾಡಿದರು.
ಜಿಲ್ಲೆಯಲ್ಲಿರುವ 18 ಸಾವಿರ ಸರ್ಕಾರಿ ನೌಕರರಿದ್ದಾರೆ. ಅವರ ಮಾನಸಿಕ, ದೈಹಿಕ ಆರೋಗ್ಯವು ಉತ್ತಮ ಆಡಳಿತ ದೃಷ್ಠಿಯಿಂದ ಮುಖ್ಯವಾಗಿದೆ. ಸರ್ಕಾರವು ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಆರೋಗ್ಯ ಯೋಜನೆಯ ಲಾಭವು ನಮ್ಮ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ತಲುಪಿಸಿ, ಯಶಸ್ವಿಗೊಳಿಸಲು ಖಾಸಗಿ ಆಸ್ಪತ್ರೆಗಳ ಸಹಕಾರವು ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪ್ರತಿನಿತ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳಿಗೆ ಆರೋಗ್ಯ ಸುರಕ್ಷತೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಯೋಜನೆಯ ನೋಂದಣಿ ಆಗುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಮನವಿ ಮಾಡಿದರು.
ಈ ಯೋಜನೆಗೆ 3 ಆಸ್ಪತ್ರೆಗಳು ಸೇರ್ಪಡೆ
ಆರೋಗ್ಯ ಸಂಜೀವಿನಿ ಯೋಜನೆಗೆ ಆದಿಚುಂಚನಗಿರಿ ಆಸ್ಪತ್ರೆ, ಬೆಳ್ಳೂರು, ಡಿ.ಆರ್.ಎಂ ಆಸ್ಪತ್ರೆ, ದಯಾನಂದ ನರ್ಸಿಂಗ್ ಹೋಂ , ಮಳವಳ್ಳಿ ಈ ಆಸ್ಪತ್ರೆಗಳು ಈ ಯೋಜನೆಗೆ ಈಗಾಗಲೇ ಸೇರ್ಪಡೆ ಆಗಿದೆ.
ಆರೋಗ್ಯ ಸಂಜೀವಿನಿಗೆ ನೋಂದಣಿ ಆಗಬೇಕಾಗಿರುವ ಮಂಡ್ಯ ಆಸ್ಪತ್ರೆಗಳು ರಾಜ್ಯ ಸರಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಗೆ ಸ್ಪಂದನ ಆಸ್ಪತ್ರೆ, ಮಂಡ್ಯ, ಸಾಂಜೋ ಆಸ್ಪತ್ರೆ, ಮಂಡ್ಯ, ಪ್ರಗತಿ ನರ್ಸಿಂಗ್ ಹೋಂ, ಮಂಡ್ಯ, ಜಿ.ಮಾದೇಗೌಡ ಆಸ್ಪತ್ರೆ, ಮಂಡ್ಯ, ಕಾವೇರಿ ನರ್ಸಿಂಗ್ ಹೋಂ, ಮಂಡ್ಯ, ರಾಮಕೃಷ್ಣ ನರ್ಸಿಂಗ್ ಹೋಂ, ಮಂಡ್ಯ, ಅರ್ಚನ ನರ್ಸಿಂಗ್ ಹೋಂ, ಮಂಡ್ಯ, ಸುರಭಿ ನರ್ಸಿಂಗ್ ಹೋಂ, ಮಂಡ್ಯ, ಮಾದೇಗೌಡ ಆಸ್ಪೆಟಿಲ್ ಕೆ.ಆರ್.ಪೇಟೆ ಈ ಆಸ್ಪತ್ರೆಗಳು ಈ ಯೋಜನೆಗೆ ನೋಂದಣಿ ಆಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್, ಜಿಲ್ಲಾ ಕುಷ್ಠ ರೋಗಿಗಳ ನಿರ್ಮೂಲನಾಧಿಕಾರಿ ಡಾ ಸೋಮಶೇಖರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗೇಶ್ ಹಾಗೂ ಮಂಡ್ಯ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
GOOD NEWS: ಮುಂಗಾರು ಹಂಗಾಮಿನಲ್ಲಿ 14.21 ಲಕ್ಷ ರೈತರಿಗೆ 2,249 ಕೋಟಿ ಪರಿಹಾರ ಜಮೆ: ಸಚಿವ ಕೃಷ್ಣ ಬೈರೇಗೌಡ
Alert : ಈ `ಬ್ಲಡ್ ಗ್ರೂಪ್’ ಹೊಂದಿರುವವರಿಗೆ `ಕ್ಯಾನ್ಸರ್’ ಅಪಾಯ ಹೆಚ್ಚು.!








