ಮೈಸೂರು: ನೈರುತ್ಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾಯೋಗಿಕ ಆಧಾರದ ಮೇಲೆ ಡಿಸೆಂಬರ್ 15, 2025 ರಿಂದ ಮಾರ್ಚ್ 14, 2026 ರವರೆಗೆ ಮೂರು ತಿಂಗಳ ಅವಧಿಗೆ ದೇವನೂರು ನಿಲ್ದಾಣದಲ್ಲಿ ರೈಲು ಸಂಖ್ಯೆ 56519/56520 ಕೆಎಸ್‌ಆರ್ ಬೆಂಗಳೂರು–ಹೊಸಪೇಟೆ–ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ರೈಲುಗಳಿಗೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲು ನಿರ್ಧರಿಸಿದೆ.
ದೇವನೂರಿನಲ್ಲಿ ಆಗಮನ ಮತ್ತು ನಿರ್ಗಮನ ಸಮಯಗಳು:
1. ರೈಲು ಸಂಖ್ಯೆ 56519 ಕೆಎಸ್‌ಆರ್ ಬೆಂಗಳೂರು–ಹೊಸಪೇಟೆ ಪ್ಯಾಸೆಂಜರ್ ರೈಲು ದೇವನೂರು ನಿಲ್ದಾಣಕ್ಕೆ ಬೆಳಿಗ್ಗೆ 08:39 ಗಂಟೆಗೆ ಆಗಮಿಸಿ, 08:40 ಗಂಟೆಗೆ ನಿರ್ಗಮಿಸಲಿದೆ.
2.ರೈಲು ಸಂಖ್ಯೆ 56520 ಹೊಸಪೇಟೆ–ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ರೈಲು ದೇವನೂರು ನಿಲ್ದಾಣಕ್ಕೆ ಸಂಜೆ 06:36 ಗಂಟೆಗೆ ಆಗಮಿಸಿ, 18:37 ಗಂಟೆಗೆ ನಿರ್ಗಮಿಸಲಿದೆ.








