ಬೆಳಗಾವಿ : ರಾಜ್ಯದಲ್ಲಿ ಕುರ್ಚಿ ಕದನದ ನಡುವೆ ಡಿನ್ನರ್ ಪಾಲಿಟಿಕ್ಸ್ ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದ್ದು, ಇದರ ಮಧ್ಯ ಯತೀಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಪದೇಪದೇ ಹೇಳಿಕೆ ನೀಡುತ್ತಿದ್ದಾರೆ.
ಇನ್ನು ಈ ವಿಚಾರವಾಗಿ ಡಿಸೆಂಬರ್ 19 ರಂದು ದೆಹಲಿಗೆ ಹೋಗುತ್ತೀರಾ ವರಿಷ್ಟರು ನಿಮಗೆ ಕರೆ ಮಾಡಿದ್ದಾರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದು, ಯಾರೂ ಕರೆದಿಲ್ಲ ಮಾಡಿಲ್ಲ ಯಾಕೆ ಸುಮ್ಮನೆ ಪ್ರಶ್ನೆ ಕೇಳುತ್ತೀರಾ? ನಿಮಗೆ ಹೇಳಿದ್ದಾರೆ ಹೇಳಿದ್ದಾರೆ ಏನ್ರಿ ಎಂದು ಮಾಧ್ಯಮದವರ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆದರು.








