ಬೆಂಗಳೂರು : ಕಳೆದ ತಿಂಗಳ ಹಿಂದೆ ಬೆಂಗಳೂರಿನಲ್ಲಿ ವೈದ್ಯೆ ಡಾಕ್ಟರ್ ಕೃತಿಕಾ ರೆಡ್ಡಿಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಒಂದು ಪ್ರಕರಣದಲ್ಲಿ ಪತಿ ಡಾಕ್ಟರ ಮಹೇಂದ್ರ ರೆಡ್ಡಿಯನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಪತಿ ಮಹೇಂದ್ರ ರೆಡ್ಡಿ ಜಾಮೀನು ಅರ್ಜಿ ವಜಾಗೋಳಿಸಲಾಗಿದೆ.
ಹೌದು ಕೊಲೆ ಪ್ರಕರಣದಲ್ಲಿ ಸದ್ಯ ಡಾಕ್ಟರ್ ಮಹೇಂದ್ರ ರೆಡ್ಡಿ ಜೈಲಲ್ಲಿ ಇದ್ದಾರೆ ಜಾಮೀನು ನೀಡುವಂತೆ ಇತ್ತೀಚಿಗೆ ಅವರು ಅರ್ಜಿ ಸಲ್ಲಿಸಿದರು. ಇಂದು ವಿಚಾರಣೆ ನಡೆಸಿ ಬೆಂಗಳೂರಿನ ಸೇಷನ್ಸ್ ನ್ಯಾಯಾಲಯ ಮಹೇಂದ್ರ ರೆಡ್ಡಿ ಅರ್ಜಿ ವಜಾ ಗೊಳಿಸಿದೆ. ಜಾಮೀನು ಅರ್ಜಿ ವಜಾ ಗೊಳಿಸುವಂತೆ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ಅನಸ್ತೇಶಿಯಾ ಖರೀದಿಗೆ ಪತಿ ಫೋನ್ ಪೇ ಮೂಲಕ ಹಣ ಪಾವತಿಸಿದ್ದಾನೆ. ನಂತರ ಮನೆಗೆ ಬಂದು ಪತ್ನಿ ಕೃತಿಕಾ ರೆಡ್ಡಿಗೆ ಅನೆಸ್ಥೆಶಿಯ ನೀಡಿದ್ದಾನೆ. ಮೃತಪಟ್ಟ ಬಳಿಕ ಮರಣೋತ್ತರ ಪರೀಕ್ಷೆಗೆ ವಿರೋಧಿಸಿದ್ದಾನೆ. ಪತ್ನಿ ಕೊಂದಿದ್ದಾಗಿ ಸ್ನೇಹಿತರಿಗೆ ಫೋನ್ ಪೇ ಸಂದೇಶ ನೀಡಿದ್ದಾನೆ ಎಂದು ವಾದ ಮಂಡಿಸಿದರು. ಬಳಿಕ ಕೋರ್ಟ್ ವಾದ ಆಲಿಸಿದ ನಂತರ ಮಹೇಂದ್ರ ರೆಡ್ಡಿ ಜಾಮೀನು ಅರ್ಜಿಯನ್ನು ವಜಾ ಗೊಳಿಸಿತು.








