ಬೆಂಗಳೂರು : ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೀಗ ಬಿ ಎಂ ಆರ್ ಸಿ ಎಲ್ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಪ್ರೋಟೋಟೈಪ್ ಚಾಲಕ ರಹಿತ ರೈಲನ್ನು ಇಂದು ಬಿಎಂಆರ್‌ಸಿಎಲ್ ಅನಾವರಣಗೊಳಿಸಿದೆ.
ಪಿಂಕ್ ಲೈನ್‌ನ ಮೂಲಮಾದರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಜೆ ರವಿಶಂಕರ್ ಅವರು ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಅನಾವರಣಗೊಳಿಸಿದರು.ಬಳಿಕ BEML ರೈಲು ಸಂಕೀರ್ಣದಲ್ಲಿ ರೈಲಿನ ಯಶಸ್ವಿ ಪರೀಕ್ಷಾರ್ಥ ಓಟ ನಡೆಸಿತು. ಕಾಳೇನ ಅಗ್ರಹಾರದಿಂದ ನಾಗಾವಾರದವರೆಗೆ ಸುಮಾರು 21.25 ಕಿಮೀ ಸಂಪರ್ಕಿಸುವ ಗುಲಾಬಿ ಮಾರ್ಗ 2026ರ ಡಿಸೆಂಬರ್ ಅಥವಾ 2027 ರಲ್ಲಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ.
ಈ ಭಾಗದಲ್ಲಿ ಮೊದಲ ಹಂತವಾಗಿ ಐದು ಹೊಸ ʻಚಾಲಕರಹಿತʼ ರೈಲುಗಳನ್ನ ಓಡಿಸಲು ಸಿದ್ಧತೆ ನಡೆಯುತ್ತಿದೆ. ಇದರ ಅಂಗವಾಗಿ ಇಂದು ಹೊಸ ರೈಲು ಮಾದರಿಯನ್ನ ಅನಾವರಣಗೊಳಿಸಿದ್ದು, ಡಿ.15ರ ನಂತರ ರೈಲುಗಳು ಕೊತ್ತನೂರು ಡಿಪೋಗೆ ಹೋಗಿ ಹಲವು ಪರೀಕ್ಷೆಗಳನ್ನ ಎದುರಿಸಲಿವೆ.








