ಬೆಂಗಳೂರು : ಲೈಂಗಿಕ ಸಮಸ್ಯೆಗೆ ಪರಿಹಾರ ನೀಡೋದಾಗಿ ಟೆಕ್ಕಿಗೆ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಲ್ಲಿ ನಕಲಿ ಗುರೂಜಿಯನ್ನು ಜ್ಞಾನ ಭಾರತಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಬಂಧಿತನನ್ನು ವಿಜಯ್ ಚಿತ್ತೋಡಿಯ ಎಂದು ತಿಳಿದುಬಂದಿದೆ.
ವಿಜಯ್ ಸಹಚರ ಮನೋಜ್ ಸಿಂಗ್ ಚಿತ್ತೋಡಿಯ ಸಹ ಕೂಡ ಇದೀಗ ಅರೆಸ್ಟ್ ಆಗಿದ್ದಾನೆ. ಬಂಧಿತ ಆರೋಪಿಗಳು ಮೂಲತಃ ಗುಜರಾತ್ ಮೂಲದವರು ಎಂದು ತಿಳಿದುಬಂದಿದೆ.ತುಮಕೂರು ಸೇರಿದಂತೆ ಒಟ್ಟು 8 ಕಡೆ ಟೆಂಟ್ ಗಳನ್ನು ಹೊಂದಿದ್ದರು. ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ಕೊಡೋದಾಗಿ ಹೇಳಿ ವಂಚನೆ ಎಸಗಿದ್ದಾರೆ. ಲೈಂಗಿಕ ಸಮಸ್ಯೆ ಎಂದು ಹೋಗಿದ್ದೆ ಟೆಕ್ಕಿಗೆ 40 ಲಕ್ಷ ವಂಚನೆ ಮಾಡಿದ್ದಾರೆ. ನಂತರ ಇವರೆಲ್ಲರೂ ಸಹ ನಕಲಿ ಸ್ವಾಮೀಜಿ ಎಂದು ಗೊತ್ತಾಗಿದೆ.
ಈ ಕುರಿತು ಜ್ಞಾನ ಭಾರತಿ ಠಾಣೆಗೆ ಟೆಕ್ಕಿ ದೂರು ನೀಡಿದ್ದಾರೆ. ತೆಲಂಗಾಣ ಮೆಹಬೂಬ್ ನಗರದಲ್ಲಿ ವಿಜಯ್ ನನ್ನ ಅರೆಸ್ಟ್ ಮಾಡಿದ್ದಾರೆ. ಸೈಬರಾಬಾದ್ ನಲ್ಲಿ ಮನೋಜ್ ನನ್ನ ಬಂಧಿಸಲಾಗಿದೆ. 40 ಲಕ್ಷದಲ್ಲಿ 19.5 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ. ಒಂದು ಟಿಟಿ ವಾಹನ ಸಹ ವಶಕ್ಕೆ ಪಡೆದಿದ್ದಾರೆ. ಸದ್ಯ ಇಬ್ಬರನ್ನು ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದಾರೆ.








