ಬೆಂಗಳೂರು: ಬಿ ಟಿ ಎಂ ಕ್ಷೇತ್ರ -ಬೆಂಗಳೂರು ನಗರದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಒಳಚರಂಡಿ ವ್ಯವಸ್ಥೆ, ಕಸ ವಿಗಂಡಣೆ ಹೀಗೆ ಹತ್ತು ಹಲವು ಜನಸ್ನೇಹಿ ಕ್ರಮಗಳಿಗೆ ಮಾದರಿಯಾದ ಕ್ಷೇತ್ರಯಾಗಿದೆ. ಅದರಲ್ಲೂ ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದಲ್ಲಿನ ಸರ್ಕಾರಿ ಶಾಲಾ/ಕಾಲೇಜುಗಳು ಹೀಗಾಗಲೇ ದೇಶದ್ಯಾಂತ ಸುದ್ದಿಯಾಗಿವೆ. ಶಿಕ್ಷಣ ಕಾಶಿ ಎಂದೇ ಹೆಸರುವಾಸಿಯಾಗಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ ತೆಲಂಗಾಣ ಶಿಕ್ಷಣ ಆಯೋಗ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಎ.ಮುರುಳಿ ಆಡುಗೋಡಿ ಸರ್ಕಾರಿ ಶಾಲೆಗೆ ಭೇಟಿ ನಿಡಿದ್ದಾರೆ.
ಹೌದು.. ಎ.ಮುರಳಿ IAS ( ನಿವೃತ್ತ) , ಅಧ್ಯಕ್ಷರು, ತೆಲಂಗಾಣ ಶಿಕ್ಷಣ ಸುಧಾರಣಾ ಆಯೋಗ ಅವರು ರಾಜ್ಯದಲ್ಲಿ ಅಭಿವೃದ್ಧಿ ಪಡಿಸಿರುವ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಪರಿಶೀಲಿಸಿ ,ತೆಲಂಗಾಣ ರಾಜ್ಯದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಭೇಟಿ ನೀಡಿದ್ದರು. ಅವರ ಭೇಟಿಯ ಒಂದು ಭಾಗವಾಗಿ ಆಡುಗೋಡಿ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಕಣ್ಣಾರೆ ಕಂಡು ಬಹಳ ಸಂತೋಷ ವ್ಯಕ್ತಪಡಿಸಿ, ಶಾಲೆಯ ಗಣ್ಯರ ಭೇಟಿಯ ಪುಸ್ತಕದಲ್ಲಿ ಈ ಕೆಳಗಿನಂತೆ ತಮ್ಮ ಕೈಬರಹದಲ್ಲಿ ದಾಖಲಿಸಿರುತ್ತಾರೆ.
ಈ ಸುಂದರವಾದ/ಪ್ರೇರಣಾದಾಯಕ ಶಾಲೆಯನ್ನು ನೋಡಿ ತುಂಬ ಸಂತೋಷವಾಗಿದೆ, ಈ ಶಾಲೆಯಿಂದ ನಾನು ಅನೇಕ ಉತ್ತಮ ಕ್ರಮಗಳನ್ನು ಕಲಿತುಕೊಂಡಿದ್ದೇನೆ ಎಂಬುದನ್ನು ಹಂಚಿಕೊಳ್ಳಲು ಸಂತೋಷಪಡುತ್ತೇನೆ. ಈ ಕ್ಷೇತ್ರದ ಎಲ್ಲಾ ಶಾಲೆಗಳ ರೂಪುಗೊಳಿಸುವಿಕೆಯಲ್ಲಿ ಗೌರವಾನ್ವಿತ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ತಮ್ಮ ಹೃದಯ ಮತ್ತು ಮನಸ್ಸಿನಿಂದ ತೊಡಗಿಸಿಕೊಂಡಿರುವುದು ತಿಳಿದು ಇನ್ನೂ ತುಂಬ ಸಂತೋಷವಾಗಿದೆ. ಮಾನ್ಯರ ವಿಧಾನ ಸಭಾ ಕ್ಷೇತ್ರದಲ್ಲಿನ ಎಲ್ಲಾ ಶಾಲೆಯ ಅಧಿಕಾರಿಗಳಿಗೆ, ಮುಖ್ಯಸ್ಥರು ಮತ್ತು ಪ್ರಾಂಶುಪಾಲರಿಗೂ ಧನ್ಯವಾದಗಳು. ಎಲ್ಲಾ ಶಿಕ್ಷಕರಿಗೂ ಮತ್ತು ಮಕ್ಕಳಿಗೂ ನನ್ನ ಹಾರ್ದಿಕ ಶುಭಾಶಯಗಳು ಎಂದು ಬರೆದಿರುತ್ತಾರೆ.

ಅವರ ಬರಹವು ಬಿ.ಟಿ.ಎಂ ಕ್ಷೇತ್ರದ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಕಾರ್ಪೋರೆಟ್ ಶಾಲೆಗಳಿಗೂ ಕಮ್ಮಿ ಇಲ್ಲದಂತೆ, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಕಂಪ್ಯೂಟರ್ ಲ್ಯಾಬ್ ಗಳು, ಸುಸಜ್ಜಿತ ಶಾಲಾ ಕೊಠಡಿಗಳು, ಮೇಜು, ಶೌಚಾಲಯ ವ್ಯವಸ್ಥೆ, ಉಚಿತ ಬ್ಯಾಗು, ಸಮವಸ್ತ್ರ, ನೋಟ್ ಬುಕ್, ಕ್ರೀಡಾಂಗಣ, ಅಡಿಟೋರಿಯಂ, ಉತ್ತಮ ದರ್ಜೆಯ ಶಿಕ್ಷಕ ವೃಂದ, ಅತ್ಯುತ್ತಮ ಪರೀಕ್ಷಾ ಫಲಿತಾಂಶ ಹೀಗೆ ರಾಜಕೀಯ ಇಚ್ಛಾಶಕ್ತಿ ಹೊಂದಿದ್ದರೆ ಬಡವರ, ಜನ ಸಾಮಾನ್ಯರ ಮಕ್ಕಳಿಗೂ ಉನ್ನತ ದರ್ಜೆಯ ಸೌಲಭ್ಯವನ್ನು ಕಲ್ಪಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಸ್ಥಳೀಯ ಶಾಸಕ, ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ
1. 23 ಸರ್ಕಾರಿ ಶಾಲಾ/ಕಾಲೇಜುಗಳು
2. ಸರ್ಕಾರಿ ಅನುದಾನಿತ ಶಾಲೆಗಳು
3. ಅತ್ಯಂತ ಬಡ ಜನರು ವಾಸಿಸುವ ಪ್ರದೇಶದಲ್ಲಿನ ಕಾನ್ವೆಂಟ್ ಶಾಲೆಗಳು
ಈ ಶಾಲೆಗಳಲ್ಲಿನ ವ್ಯವಸ್ಥೆ, ಅಭಿವೃದ್ಧಿಯನ್ನು ಕಣ್ಣಾರೆ ನೋಡಿ ಅನುಭವಿಸಿ ಅರ್ಥೈಸಿಕೊಂಡರೆ ಸಚಿವ ರಾಮಲಿಂಗಾ ರೆಡ್ಡಿ ಅವರ ಆಶಯ, ಕನಸು ಮತ್ತು ಬಡವರ, ಜನಸಾಮಾನ್ಯರ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯವನ್ನು ಒದಗಿಸಬೇಕು ಎನ್ನುವ ಅವರ ಆಶಯ ಅದರ ಹಿಂದಿನ ಕಾಳಜಿಗೆ ಧನ್ಯವಾದ ತಿಳಿಸಲು ಮಾತುಗಳೇ ಸಾಲದಾಗುತ್ತದೆ. ಸಚಿವ ರಾಮಲಿಂಗಾ ರೆಡ್ಡಿ ಅಂತಹ ಜನನಾಯಕರು ಹೃದಯದಿಂದ ಮಾಡುವ ಯಾವುದೇ ಕೆಲಸಗಳು ಹಲವು ಬಡಜನರ ಹೃದಯ ಮುಟ್ಟುವಂತಹ ಫಲಿತಾಂಶವನ್ನೇ ನೀಡುತ್ತಿವೆ ಎಂದಿದ್ದಾರೆ.








