ಬೆಂಗಳೂರು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಿಳೆಯರು ಮತ್ತು ಮಕ್ಕಳಿಗೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದು, ಈ ಯೋಜನೆಗಳಡಿ ಮಹಿಳೆಯರು ಮತ್ತು ಮಕ್ಕಳಿಗೆ ಈ ಎಲ್ಲಾ ಸೌಲಭ್ಯಗಳು ಸಿಗಲಿವೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ
6 ತಿಂಗಳಿನಿಂದ 6 ವರ್ಷದವರೆಗಿನ ಮಕ್ಕಳಿಗೆ, ಬಾಣಂತಿಯರಿಗೆ, ಪ್ರಾಯ ಪೂರ್ವ ಬಾಲಕಿಯರಿಗೆ ಪೂರಕ ಪೌಷ್ಠಿಕ ಆಹಾರ, ಆರೋಗ್ಯ ಸೇವೆಗಳು. (ಹಾಲು, ಕಾಳು, ಧಾನ್ಯಗಳು)
ಭಾಗ್ಯಲಕ್ಷ್ಮೀ ಯೋಜನೆ
ಬಿಪಿಎಲ್ ಕುಟುಂಬದಲ್ಲಿ ಜನಿಸುವ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಆರೋಗ್ಯ ವಿಮೆ ಮತ್ತು 18 ವರ್ಷ ತುಂಬಿದ ನಂತರ ರೂ. 1 ಲಕ್ಷ ಮೊತ್ತ ಪಾವತಿ ಸೌಲಭ್ಯ.
ಸ್ತ್ರೀ ಶಕ್ತಿ ಯೋಜನೆ
ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸರಕಾರದಿಂದ ಸುತ್ತು ನಿಧಿ, ತರಬೇತಿ, ಬಡ್ಡಿ ಸಹಾಯ ಧನ ಮತ್ತು ಪ್ರೋತ್ಸಾಹ ಧನ ವಿತರಣೆ.
ಉದ್ಯೋಗಿನಿ ಯೋಜನೆ
ಮಹಿಳೆಯರು ಸ್ವಂತ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ 3 ಲಕ್ಷದವರೆಗೆ ಬ್ಯಾಂಕಿನಿಂದ ಸಾಲವನ್ನು ಪಡೆಯಬಹುದಾಗಿದೆ. ಪಡೆಯುವ ಸಾಲಕ್ಕೆ ಸಾಮಾನ್ಯ ವರ್ಗಕ್ಕೆ 30% ಮತ್ತು ಪ.ಜಾ/ಪ.ಪಂ ವರ್ಗಕ್ಕೆ 50% ರಷ್ಟು ಸಾಲದ ಮೇಲೆ ಸಬ್ಸಿಡಿ ನೀಡಲಾಗುತ್ತದೆ.
ಏಡ್ಸ್/ಹೆಚ್.ಐ.ವಿ. ಸೋಂಕಿತ/ಬಾಧಿತ ಮಕ್ಕಳ ವಿಶೇಷ ಪಾಲನಾ ಯೋಜನೆ
ಏಡ್ಸ್/ಹೆಚ್.ಐ.ವಿ. ಸೋಂಕಿತ/ಬಾಧಿತ ಮಕ್ಕಳ ಜೀವನ ಮಟ್ಟ ಉತ್ತಮಪಡಿಸಲು ಶಿಕ್ಷಣ ಒದಗಿಸುವ ಮೂಲಕ ಅವರನ್ನು ಸಬಲರನ್ನಾಗಿಸಲು ಆರೋಗ್ಯ ಸೇವೆ ಹಾಗೂ ಮೂಲಕ ಉತ್ತಮ ಪೌಷ್ಠಿಕ ಆಹಾರ ಒದಗಿಸುವುದರ ಸೋಂಕು ಉಲ್ಬಣವಾಗದಂತೆ ಮಾಡಲು ಅವರಿಗೆ ಆರ್ಥಿಕ ಸಹಾಯವನ್ನು ಕಲ್ಪಿಸುವ ಯೋಜನೆಯಾಗಿರುತ್ತದೆ.
ಸ್ವಾಧಾರ ಕೇಂದ್ರ ಮತ್ತು ಮಹಿಳೆಯರ ಅಲ್ಪಾವಧಿ ವಸತಿ ಗೃಹ
ಸಂಷ್ಟದಲ್ಲಿರುವ ಮಹಿಳೆಯರಿಗೆ ಮೂಲಭೂತ ಅವಶ್ಯಕತೆಗಳಾದ ಆಶ್ರಯ, ಪೋಷಣೆ ಮತ್ತು ರಕ್ಷಣೆಯ ಜೊತೆಗೆ ಮಾನಸಿಕ ಬೆಂಬಲ ಮತ್ತು ಕೌನ್ಸಿಲಿಂಗ್, ವೃತ್ತಿಪರ ಕೌಶಲ್ಯ ತರಬೇತಿ, ಮನೋವೈದ್ಯಕೀಯ, ಕಾನೂನು, ಪೊಲೀಸ್ ಮತ್ತು ಇತರ ನೆರವು ಹಾಗೂ ಕೌಟುಂಬಿಕ/ಸಾಮಾಜಿಕ ಪುನರ್ ವಸತಿ ಮತ್ತು ಅನುಸರಣಾ ಸೇವೆಯನ್ನು ಸ್ವಾಧಾರ ಕೇಂದ್ರದ ಮೂಲಕ ಒದಗಿಸಲಾಗುತ್ತದೆ.









