ನವದೆಹಲಿ : ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ದೆಹಲಿಯ ರಾಜಘಾಟ್ ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ಹೈದರಾಬಾದ್ ಹೌಸ್ ನಲ್ಲಿ ಪ್ರಧಾನಿ ಮೋದಿ ಹಾಗೂ ಪುಟಿನ್ ನಡುವೆ ದ್ವಿಪಕ್ಷಿಯ ಮಾತುಕತೆ ನಡೆಯಲಿದೆ.
ಈ ವೇಳೆ ದೆಹಲಿಯ ರಾಜಘಾಟ್ ನಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಪುಟಿನ್ ಅವರು ಪುಷ್ಪ ನಮನ ಸಲ್ಲಿಸಿ ಗಾಂಧೀಜಿ ಸಮಾಧಿಗೆ ನಮಿಸಿದರು. ಬಳಿಕ ವಿಸಿಟರ್ ನಲ್ಲಿ ಶಾಂತಿಗಾಗಿ ಮಹಾತ್ಮ ಗಾಂಧೀಜಿ ಹೊಸ ಸಂದೇಶ ನೀಡಿದ್ದಾರೆ. ಮಹಾತ್ಮ ಗಾಂಧೀಜಿ ಆದರ್ಶಗಳು ಇಂದಿಗೂ ಜೀವಂತವಾಗಿವೆ. ಗಾಂಧೀಜಿ ಆದರ್ಶದಿಂದ ಭಾರತ ಮತ್ತು ರಷ್ಯಾ ಉತ್ತಮ ಸಂಬಂಧ ಹೊಂದಿದೆ. ಮಹಾತ್ಮ ಗಾಂಧೀಜಿ ಇಡೀ ವಿಶ್ವಕ್ಕೆ ಆದರ್ಶರಾಗಿದ್ದಾರೆ. ಇಡೀ ಜಗತ್ತು ಸಮಾನತೆ, ಗೌರವ ಅಹಿಂಸೆಯ ತತ್ವ ಬಯಸಿದೆ ಎಂದು ವಿಸಿಟರ್ ಪುಸ್ತಕದಲ್ಲಿ ಪುಟಿನ್ ಬರೆದಿದ್ದಾರೆ.
ಇಂದು ರಷ್ಯಾ ಅಧ್ಯಕ್ಷ ಪುಟಿನ್ ಅವರು ದೆಹಲಿಯ ರಾಜ್ ಘಾಟ್ ನಲ್ಲಿರುವ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಬಳಿಕ ದೆಹಲಿಯ ಹೈದರಾಬಾದ್ ಹೌಸಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೆರಳಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಪುಟಿನ್ ನಡುವೆ ಹಲವು ಮಹತ್ವದ ಒಪ್ಪಂದ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರಪತಿ ಭವನದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಗಾರ್ಡ್ ಆಫ್ ಆನರ್ ನೀಡಲಾಯಿತು.ಬಳಿಕ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಧ್ಯಕ್ಷೆ ದ್ರೌಪದಿ ಮುರ್ಮು ಹಸ್ತಲಾಘವ ಮಾಡಿದ್ದಾರೆ. ರಷ್ಯಾ ಅಧ್ಯಕ್ಷರು ಮತ್ತು ಪ್ರಧಾನಿ ನರೇಂದ್ರ ಮೋದಿ ಕೂಡ ಹಸ್ತಲಾಘವ ಮಾಡಿದ್ದಾರೆ.








