ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಯುವತಿಗೆ ಮದುವೆಯಾಗೋದಾಗಿ ನಂಬಿಸಿ ಲವ್ ಸೆಕ್ಸ್ ದೋಖಾ ಮಾಡಿರುವ ಪ್ರಕರಣ ಇದೀಗ ತದವಾಗಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿ 9 ತಿಂಗಳಾದ್ರು ಕ್ರಮ ಕೈಗೊಳ್ಳದ ಪೋಲೀಸರ ವಿರುದ್ಧ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಸುದ್ದಗುಂಟೆಪಾಳ್ಯ ಠಾಣೆ ವಿರುದ್ಧಆರೋಪ ಕೇಳಿಬಂದಿದೆ. ಯುವತಿಗೆ ಸ್ನೇಹಿತರ ಮೂಲಕ ಪರಿಚಯವಾಗಿದ್ದ ಆರೋಪಿ ಉಮ್ಮಾನ್. ಬಳಿಕ ಪ್ರೀತಿ ಮಾಡುವಂತೆ ಯುವತಿಯ ಹಿಂದೆ ಉಮ್ಮಾನ್ ಬಿದ್ದಿದ್ದಾನೆ. ಪ್ರೀತಿ ಮಾಡುವುದಾಗಿ ನಂಬಿಸಿ ಲಕ್ಷಾಂತರ ಹಣ, ಚಿನ್ನಾಭರಣ ಪಡೆದಿದ್ದ. ಅಲ್ಲದೇ ಯುವತಿಯ ಜೊತೆಗೆ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿರೋ ಆರೋಪ ಕೇಳಿಬಂದಿದೆ.
13 ಲಕ್ಷ ಹಣ ಮತ್ತು ಚಿನ್ನ ಪಡೆದು ವಂಚನೆ ಮಾಡಿರೋ ಆರೋಪ ಕೇಳಿಬಂದಿದೆ. ಇಸ್ಲಾಂ ಧರ್ಮಕ್ಕೆ ಮತಾಂತಗೊಳ್ಳುವಂತೆ ಯುವತಿಗೆ ಬೆದರಿಕೆ ಹಾಕಿದ್ದಾನೆ. ಬಲವಂತವಾಗಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ದೆಹಲಿ ಕೇಸ್ ನಂತೆ ನಿನ್ನನ್ನು ಪೀಸ್ ಪೀಸ್ ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದಾನೆ.ಇದರಿಂದ ನೊಂದು ಮಾರ್ಚ್ ತಿಂಗಳಲ್ಲಿ ಎಸ್.ಜಿ ಪಾಳ್ಯ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ನಂತರ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಆರೋಪಿಯಿಂದ ಹಣ, ಚಿನ್ನಾಭರಣ ರಿಕವರಿ ಮಾಡಿಲ್ಲ. ಅವನನ್ನ ಸರಿಯಾಗಿ ವಿಚಾರಣೆ ನಡೆಸಿಲ್ಲ ಎಂದು ಯುವತಿ ಆರೋಪಿಸಿದ್ದಾಳೆ.








