ಬೆಂಗಳೂರು : ಬೆಂಗಳೂರಿನಲ್ಲಿ ಕತ್ತು ಕೊಯ್ದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ತನಿಖೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹಿಮಾಚಲ ಪ್ರದೇಶ ಮೂಲದ ತಿಲಕ ಕುಮಾರ್ (32) ಆತ್ಮಹತ್ಯೆಗೆ ಶರಣಾಗಿದ್ದಾನೆ. ಗಂಟಲು ನೋವಿನಿಂದ ಬಳಲುತ್ತಿದ್ದರಿಂದ ತಿಲಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ತಿಲಕ್ 5000 ಕೊಡು ವಾಪಸ್ ಕೊಡುತ್ತೇನೆ ಎಂತ ತನ್ನ ಅಣ್ಣನ ಬಳಿ ಕೇಳಿದ್ದ. ಈಗ ಹಣ ಎಲ್ಲ ಒಂದು ವಾರ ಬಿಟ್ಟಕೊಡುವುದಾಗಿ ಅಣ್ಣ ಹೇಳಿದ್ದ. ಬಳಿಕ ಚಾಕುನಿಂದ ಕತ್ತು ಕೊಯ್ದ ರೀತಿಯಲ್ಲಿ ತಿಲಕ್ ಶವ ಪತ್ತೆಯಾಗಿದೆ. ನವೆಂಬರ್ 29ರಂದು ಜೆಪಿ ನಗರದ ಮೊದಲನೇ ಹಂತದಲ್ಲಿ ಈ ಒಂದು ಘಟನೆ ನಡೆದಿದೆ. ಫುಟ್ಪಾತ್ ಬಳಿಯ ಮರದ ಕೆಳಗೆ ಕುಳಿತಿದ್ದ ರೀತಿ ಶವ ಪತ್ತೆಯಾಗಿತ್ತು ರಕ್ತದ ಕಲೆ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಜೆಪಿ ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಕೊಲೆ ಶಂಕೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ತನಿಖೆಯ ವೇಳೆ ತಾನೆ ಚಾಕು ಖರೀದಿ ಮಾಡಿರುವುದು ಬೆಳಕಿಗೆ ಬದಿತ್ತು. ಅಂಗಡಿ ಒಂದರಲ್ಲಿ ತಿಲಕ್ ಕುಮಾರ್ ಚಾಕು ಖರೀದಿ ಮಾಡಿದ ತನಿಖೆಯಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.








