Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

​ಪಂದ್ಯದ ಒತ್ತಡಕ್ಕೆ ‘ಚೋಟಾ ಭೀಮ್’ ಮದ್ದು: ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯ ವಿಶಿಷ್ಟ ಅಭ್ಯಾಸವನ್ನು ಬಹಿರಂಗಪಡಿಸಿದ ಹರ್ಷ ಗೋಯೆಂಕಾ!

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗ ನೇಮಕಾತಿಯಲ್ಲಿ ಹೊಸ ಅಲೆ ಸೃಷ್ಠಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎರಡೂವರೆ ವರ್ಷದಲ್ಲೇ 10,000 ಹುದ್ದೆ ನೇಮಕ
KARNATAKA

ಉದ್ಯೋಗ ನೇಮಕಾತಿಯಲ್ಲಿ ಹೊಸ ಅಲೆ ಸೃಷ್ಠಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎರಡೂವರೆ ವರ್ಷದಲ್ಲೇ 10,000 ಹುದ್ದೆ ನೇಮಕ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆ ಇತಿಹಾಸದಲ್ಲೇ ಹೊಸ ಅಲೆಯನ್ನು ಉದ್ಯೋಗ ನೇಮಕಾತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಸೃಷ್ಠಿಸಿದ್ದಾರೆ. ಅದೇ ಎರಡೂವರೆ ವರ್ಷದಲ್ಲೇ ಸಾರಿಗೆ ಇಲಾಖೆಯಲ್ಲಿ ಖಾಲಿ ಇದ್ದಂತ ಬರೋಬ್ಬರಿ 10,000 ಉದ್ಯೋಗ ನೇಮಕಾತಿಯನ್ನು ನಡೆಸಲಾಗಿದೆ.

ಹೌದು.. ಸಾರಿಗೆ ಸಂಸ್ಥೆಗಳಲ್ಲಿ 10000 ನೇಮಕಾತಿ ಎರಡುವರೆ ವರ್ಷದ ಅವಧಿಯಲ್ಲಿ ಅನ್ನುವುದು ಸುಲಭದ ಮಾತಲ್ಲ. ಅದರಲ್ಲೂ ಒಂದೇ ಒಂದು ವಿವಾದವಿಲ್ಲದೇ, ಭ್ರಷ್ಟಾಚಾರ ರಹಿತ,‌ಪಾರದರ್ಶಕ ನೇಮಕಾತಿ ಅಂದರೆ ಮೆಚ್ಚಲೇಬೇಕು. ವಿರೋಧ‌ಪಕ್ಷವಾದ ಬಿ.ಜೆ.ಪಿ ಅವರಿಗೆ ತಾವು ಕೆಲಸ‌ ಮಾಡಿ‌, ಸಾಧಿಸಿ ತೋರಿಸಿ ಕ್ರೆಡಿಟ್ ತೆಗೆದುಕೊಳ್ಳುವ ಅಭ್ಯಾಸವಿಲ್ಲ. ಕ್ಷುಲ್ಲಕ ಕಾರಣಗಳಿಗೆ ಟ್ಟೀಟ್ ಮೇಲೆ ಟ್ಟೀಟ್ ಮಾಡಿ ಸಾಧನೆ ಮಾಡುವ ಖಯಾಲಿ ಬಹಳಷ್ಟಿದೆ.

ಈ ಮುನ್ನುಡಿಗೆ ಕಾರಣವಾಗಿರುವುದು ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1000 ಚಾಲನಾ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಅನುಮೋದನೆ‌ ಪಡೆದು ಆದೇಶ‌ ಕೂಡ ಹೊರಬಿದ್ದಿದೆ. ಇಲ್ಲಿಯವರೆಗೆ ಕಳೆದ ಎರಡುವರೆ ವರ್ಷದಲ್ಲಿ ನಾಲ್ಕು ನಿಗಮಗಳಲ್ಲಿನ ನೇಮಕಾತಿ ವಿವರ, ಅನುಕಂಪದ ನೌಕರಿಯೂ ಒಳಗೊಂಡು ಒಟ್ಟು 9989 ನೇಮಕಾತಿ ಮಾಡಲಾಗಿದೆ.

ಹೀಗಿದೆ ನಿಗಮವಾರು ನೇಮಕಾತಿಗಳ ವಿವರ

ಕೆ ಎಸ್ ಆರ್ ಟಿ ಸಿ -2800
ಬಿ ಎಂ ಟಿ ಸಿ- 2828
ವಾಯವ್ಯ ರಸ್ತೆ ಸಾರಿಗೆ- 2261
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ – 2900

1. ಕೋವಿಡ್ -19 ರ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ‌ ಸಂಖ್ಯೆ ಆಇ03 ಬಿಇಎಂ 2020, ದಿನಾಂಕ: 06.07.2020 ರನ್ವಯ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಬಿ.ಜೆ.ಪಿ‌ ಸರ್ಕಾರವು ತಡೆಹಿಡಿದಿತ್ತು.

2. ಹಲವು ಬಾರಿ ವಾಯವ್ಯ ಸಾರಿಗೆ ಸಂಸ್ಥೆಯವರು ನಿರಂತರವಾಗಿ 2023 ರವರೆಗೆ 2 ವರ್ಷ 8 ತಿಂಗಳುಗಳ‌ ಕಾಲ ಮನವಿಯನ್ನು ಸಲ್ಲಿಸಿದರೂ ಅನುಮತಿ ನೀಡಿರಲಿಲ್ಲ.

3. ಕಾಂಗ್ರೆಸ್ ಸರ್ಕಾರ ಬಂದ ನಂತರ ದಿನಾಂಕ: 1.03.2024 ರ ಆದೇಶದಲ್ಲಿ ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಗೆ ಅನುಮೋದನೆ ನೀಡಲಾಗಿರುತ್ತದೆ.

4. 2019 ರಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ಕೇವಲ ಚಾಲಕರ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ವಾಯವ್ಯ ಸಾರಿಗೆ ಸಂಸ್ಥೆಯ‌ ಮನವಿ ಮೇರೆಗೆ, ನಿರ್ವಾಹಕ‌ ಹುದ್ದೆಗಳನ್ನು ಭರ್ತಿಮಾಡಲು ಅಧಿಸೂಚನೆಯಲ್ಲಿ ಮಾರ್ಪಾಡು ಮಾಡಿ 1000 ನಿರ್ವಾಹಕ‌ ಹುದ್ದೆಗಳಿಗೆ ಅನುಮತಿ ನೀಡಲಾಗಿತ್ತು.

5. ಈ‌ ಸಂಬಂಧ ಅಭ್ಯರ್ಥಿಗಳು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಿ, ಈಗಾಗಲೇ ಚಾಲಕ‌ ಹುದ್ದೆಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ಅಭ್ಯರ್ಥಿಗಳ ವಯೋಮಿತಿ ಮೀರಿದ್ದು, ಬೇರೆ ಯಾವುದೇ ಸರ್ಕಾರಿ‌ ಹುದ್ದೆಗೆ ಅರ್ಹರಾಗಿರುವುದಿಲ್ಲ. ಆದ್ದರಿಂದ ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಕೋರಿದ್ದರು.

6. ಹುಬ್ಬಳ್ಳಿಯಲ್ಲಿ ಅಭ್ಯರ್ಥಿಗಳು ಈ ಸಂಬಂಧ ಪ್ರತಿಭಟನೆ ನಡೆಸುತ್ತಿದ್ದಾಗ ಬೊಮ್ಮಾಯಿ ಅವರು, ಪ್ರಹ್ಲಾದ್ ಜೋಷಿ ಅವರು ಇತರೆ ಬಿ.ಜೆ.ಪಿ‌ ಮುಖಂಡರು ತಮ್ಮ ಅವಧಿಯಲ್ಲಿ ತಡೆಹಿಡಿದಿದ್ದ ನೇಮಕಾತಿಯನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನುಮತಿ‌ ನೀಡಿಸುವ ಬಗ್ಗೆ ಭರವಸೆ ಕೊಟ್ಟರು. ಹೆಚ್ ಕೆ ಪಾಟೀಲ್, ಸಂತೋಷ್ ಲಾಡ್, ರಾಜು ಕಾಗೆ ರವರು ಸಹ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದರು.

ಅಂದರೆ‌ ಬಿ.ಜೆ.ಪಿ ಯ ನಾಯಕರುಗಳಿಗೆ ತಮ್ಮ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರದ ಅದರಲ್ಲೂ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ರವರ ಮೇಲಿನ ಬಲವಾದ ನಂಬಿಕೆ‌ ಮತ್ತು ಭರವಸೆ ಎಷ್ಟಿದೆ ಎಂಬುದು ಅರ್ಥವಾಯಿತಲ್ಲವೇ? ಸಾರಿಗೆ ಹಾಗೂ ಮುಜರಾಯಿ ಸಚಿವರು ಹುಬ್ಬಳ್ಳಿಗೆ ತೆರಳಿದಾಗ, ಅಭ್ಯರ್ಥಿಗಳನ್ನು ಭೇಟಿ ಮಾಡಿ, ತಮ್ಮಗಳ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ತಮಗೆ ನ್ಯಾಯ ಒದಗಿಸಲಾಗುವುದು. ಈ ‌ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನಿಸಿ, ಮುಂದಿನ ಬೆಳಗಾವಿ ಅಧಿವೇಶನಕ್ಕೂ ಮುಂಚೆಯೇ ತಮಗೆ ಸಂತೋಷ‌ದ ಸುದ್ದಿ‌‌ ನೀಡಲಾಗುವುದು ಎಂದು ಭರವಸೆ ನೀಡಿದ್ದರು.

ಅದರಂತೆ, ಸಚಿವ ಸಂಪುಟ ಸಭೆಯಲ್ಲಿ 2019 ರ ಅಧಿಸೂಚನೆಗೆ ಅನುಗುಣವಾಗಿ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1000 ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ‌ ಪಡೆದು, ಆಧಿಕೃತ ಆದೇಶವನ್ನು ಸಹ ಹೊರಡಿಸಲಾಗಿದೆ.

ಟ್ಟೀಟ್ ಮಾಡುವುದರಲ್ಲಿ ಬದ್ಧತೆಯಲ್ಲ, ಜನಸೇವೆಯಲ್ಲಿ‌ ಬದ್ಧತೆ ತೋರಿಸಿ ಸಾಧಿಸಿರುವ ರಾಮಲಿಂಗಾ ರೆಡ್ಡಿ ಅವರ‌ ಕಾರ್ಯವೈಖರಿಗೆ ನಮ್ಮದೊಂದು‌ Hatsoff ಎಂಬುದಾಗಿ ಕನ್ನಡಿಗರು ಸಂತಸ ವ್ಯಕ್ತ ಪಡಿಸಿದ್ದಾರೆ.

ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಇಲ್ಲಿದೆ | Karnataka Cabinet Meeting Highlights

BREAKING: ಆಯಾ ಜಿಲ್ಲಾ ಹಂತದಲ್ಲೇ ‘ಆರೋಗ್ಯ ರಕ್ಷಾ ಸಮಿತಿ ಸದಸ್ಯ’ರ ಅನುಮೋದನೆ, ಅಧಿಸೂಚನೆಗೆ ಅಧಿಕಾರ: ರಾಜ್ಯ ಸರ್ಕಾರ ಆದೇಶ

Share. Facebook Twitter LinkedIn WhatsApp Email

Related Posts

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

1 Min Read

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

1 Min Read

ರಾಜ್ಯದಲ್ಲಿ ರೌಡಿಸಂ ಮಟ್ಟಹಾಕಲು ಸರ್ಕಾರ ಬಿಗ್ ಆ್ಯಕ್ಷನ್: ಪ್ರತಿ ಠಾಣಾ ಮಟ್ಟದಲ್ಲೂ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಆದೇಶ

2 Mins Read
Recent News

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

​ಪಂದ್ಯದ ಒತ್ತಡಕ್ಕೆ ‘ಚೋಟಾ ಭೀಮ್’ ಮದ್ದು: ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯ ವಿಶಿಷ್ಟ ಅಭ್ಯಾಸವನ್ನು ಬಹಿರಂಗಪಡಿಸಿದ ಹರ್ಷ ಗೋಯೆಂಕಾ!

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

​ಎಲ್‌ಪಿಜಿ ದರ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ತೀವ್ರ ವಾಗ್ದಾಳಿ

State News
KARNATAKA

ಮೆಡಿಕಲ್ ಕಾಲೇಜು, ಸ್ಥಳೀಯರಿಗೆ ಉದ್ಯೋಗ, ಸರ್ವರಿಗೂ ಸೂರು, ಕೆಪಿಎಸ್ ಶಾಲೆಗಳು, ಸಮಸ್ಯೆ ಆಲಿಸಲು ಅಧಿಕಾರಿ ನೇಮಕ; ಸಿಎಂ ಡಿ.ಕೆ.ಶಿವಕುಮಾರ್

By ವಸಂತ ಬಿ ಈಶ್ವರಗೆರೆ KARNATAKA 1 Min Read

ಕನಕಪುರ :”ಕ್ಷೇತ್ರದ ಬಡವರಿಗೆ ತಲೆ ಮೇಲೆ ಸೂರು, ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕಡ್ಡಾಯ. ಮೆಡಿಕಲ್‌ ಕಾಲೇಜು ಶೀಘ್ರ ಪ್ರಾರಂಭ. ಸಮಸ್ಯೆಗಳನ್ನು…

‘ಬಿಜೆಪಿ, ಜೆಡಿಎಸ್’ನಿಂದ ಮತ್ತೊಬ್ಬ ಶಿವಕುಮಾರ್ ಹುಟ್ಟುಹಾಕಲು ಸಾಧ್ಯವಿಲ್ಲ: ಸಿಎಂ ಡಿಕೆಶಿ

ರಾಜ್ಯದಲ್ಲಿ ರೌಡಿಸಂ ಮಟ್ಟಹಾಕಲು ಸರ್ಕಾರ ಬಿಗ್ ಆ್ಯಕ್ಷನ್: ಪ್ರತಿ ಠಾಣಾ ಮಟ್ಟದಲ್ಲೂ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಆದೇಶ

ಮಂಡ್ಯದ ಮದ್ದೂರಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ವಿಶ್ವ ಪರಿಸರ ದಿನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.