ಬೆಂಗಳೂರು : ರೇಣುಕಾಸ್ವಾಮೀ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್ ಪರಪ್ಪನ ಆಗ್ರಹಾರ ಜೈಲಲ್ಲಿ ಇದ್ದು, ಇದೀಗ ಕೊನೆಗೂ ದರ್ಶನ್ ಗೆ ಟಿವಿ ಭಾಗ್ಯ ದೊರೆತಿದೆ. ಬೆಂಗಳೂರಿನ 57ನೇ CCH ನ್ಯಾಯಾಲಯ ದರ್ಶನ್ ಇರೋ ಬ್ಯಾರಕ್ ನಲ್ಲಿ ಟಿವಿ ಅಳವಡಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್ ಜಾರಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೋರ್ಟ್ ಡಿಸೆಂಬರ್ 17 ರಂದು ಸಾಕ್ಷಿಗಳಿಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ರೇಣುಕಾಸ್ವಾಮಿ ತಂದೆ ಹಾಗು ತಾಯಿಗೆ ಸಮನ್ಸ್ ಜಾರಿ ಮಾಡಿದೆ.
ಬೆಂಗಳೂರಿನ 57ನೇ CCH ಕೋರ್ಟ್ ಈ ಒಂದು ಸಮನ್ಸ್ ಜಾರಿ ಮಾಡಿದ್ದು, ವಿಟ್ನೆಸ್ ನಂಬರ್ CW 7,8 ಆಗಿರುವ ತಂದೆ ತಾಯಿಗೆ ಸಮನ್ಸ್ ಜಾರಿಗೆ ಆದೇಶಸಿದೆ. ದರ್ಶನ್ ಬ್ಯಾರಾಕ್ ನಲ್ಲಿ ಟಿವಿ ಅಳವಡಿಕೆಗೂ ಕೋರ್ಟ್ ಸೂಚನೆ ನೀಡಿದೆ. ಯಾವ ಸಾಕ್ಷಿಗಳನ್ನು ಹಾಜರೂಪಡಿಸಬೇಕೆಂಬುದು ಪ್ರಾಜಿಕ್ಯೂಷನ್ ಆಯ್ಕೆ ದರ್ಶನ್ ಪರ ವಕೀಲರ ಆಕ್ಷೇಪ ತಿರಸ್ಕರಿಸಿ ಕೋರ್ಟ್ ಆದೇಶ ಹೊರಡಿಸಿದೆ.








