ಬೆಂಗಳೂರು : ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.
ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ, ಪರಿಹಾರ ವಿಧೇಯಕ ಸಂಪುಟ ಸಭೆಯಲ್ಲಿ ವಿಧೇಯಕ ಮಂಡನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಗ್ರಾಮ ಅಥವಾ ಸಮುದಾಯದದಿಂದ ಹೊರಹಾಕುವುದಕ್ಕೆ ನಿರ್ಬಂಧ, ಧಾರ್ಮಿಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ ವಿಧಿಸಿವುದು, ಸಾರ್ವಜನಿಕ ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿ ಮಾಡುವುದು, ಸಾಮಾಜಿಕ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆಯುವುದು.ವ್ಯವ್ಯಹಾರ ಅಥವಾ ಉದ್ಯೋಗ ತಿರಸ್ಕಾರ ಮಾಡುವುದು ಶಾಲೆ ಆಸ್ಪತ್ರೆ, ಸಮುದಾಯ ಭವನ ಪ್ರವೇಶಕ್ಕೆ ತಡೆಯೋಡ್ದುವುದು.
ಸೇವೆ, ಅವಕಾಶ ನಿರಾಕರಿಸುವುದನ್ನು ತಡೆಯಲು ನಿರ್ಬಂಧ, ಮದುವೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ತಡೆಯೋಡ್ಡುವುದು.ಸಂಬಂಧ ಕಡಿತಗೊಳಿಸಲು ಪ್ರಚೋದನೆ ನೀಡುವುದು. ಲಿಂಗತ್ವದ ಆಧಾರಾದ ಮೇಲೆ ಬೇಧ ಮಾಡುವುದು, ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆಯೋಡ್ದುವುದು ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿ ಪಡಿಸುವುದು.ಮಾನವ ಹಕ್ಕುಗಳ ನಿರಾಕರಣೆ, ಬಟ್ಟೆ ಭಾಷೆ ಸಂಸ್ಕೃತಿಕ ಭೇದ ಮಾಡುವುದು. ಸಂಪುಟ ಸಭೆಯಲ್ಲಿ ವಿಧೇಯಕ ಮಂಡನೆಗೆ ಅನುಮೋದನೆ ಸಾಧ್ಯತೆ ಇದೆ.








