ಬಿಜಾಪುರ : ಛತ್ತೀಸ್ಗಢದ ಬಿಜಾಪುರದಲ್ಲಿ ಒಂದು ಪ್ರಮುಖ ಎನ್ಕೌಂಟರ್ ನಡೆದಿದ್ದು, ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಈ ಗುಂಡಿನ ಚಕಮಕಿಯಲ್ಲಿ 12 ಮಾವೋವಾದಿಗಳು ಸಾವನ್ನಪ್ಪಿದರು. ಈ ಕಾರ್ಯಾಚರಣೆಯಲ್ಲಿ ಇಬ್ಬರು ಜಿಲ್ಲಾ ಮೀಸಲು ಪಡೆ (DRG) ಸೈನಿಕರು ಹುತಾತ್ಮರಾದರು.
ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಅರಣ್ಯಗಳಲ್ಲಿ ಇತರ ನಕ್ಸಲರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ಬಸ್ತರ್ ವಿಭಾಗದ ದಂತೇವಾಡ ಪಕ್ಕದಲ್ಲಿರುವ ಗಂಗಲೂರು ಪ್ರದೇಶದ ಕಾಡುಗಳಲ್ಲಿ ನಕ್ಸಲರಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ಬಸ್ತರ್ ರೇಂಜ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಂದರರಾಜ್ ಪಟಲಿಂಗಮ್ ಹೇಳಿದ್ದಾರೆ. ಈ ಸಮಯದಲ್ಲಿ ಎನ್ಕೌಂಟರ್ ಪ್ರಾರಂಭವಾಯಿತು. ಡಿಆರ್ಜಿ ಜೊತೆಗೆ ಕಮಾಂಡೋಗಳ ನೇತೃತ್ವದ ವಿಶೇಷ ಕಾರ್ಯಪಡೆ ಮತ್ತು ಸಿಆರ್ಪಿಎಫ್ ಕೋಬ್ರಾ ಕಮಾಂಡೋಗಳು 12 ಮಾವೋವಾದಿಗಳನ್ನ ಕೊಂದರು.
ಎನ್ಕೌಂಟರ್’ನಲ್ಲಿ ಸಾವನ್ನಪ್ಪಿದ ಮಾವೋವಾದಿಗಳ ಶವಗಳನ್ನ ವಶಪಡಿಸಿಕೊಳ್ಳಲಾಗಿದೆ. ಅರಣ್ಯದ ಸುತ್ತಲಿನ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ ಎಂದು ಪಡೆಗಳು ತಿಳಿಸಿವೆ. ಸ್ಥಳದಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ . ಸಿಂಗಲ್ – ಲೋಡಿಂಗ್ ರೈಫಲ್’ಗಳು, 303 ರೈಫಲ್’ಗಳು, ಇತರ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ಆದಾಗ್ಯೂ, ನಕ್ಸಲರು ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನ ಮರೆಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಹೆಚ್ಚುವರಿ ಪಡೆಗಳನ್ನ ಸ್ಥಳಕ್ಕೆ ನಿಯೋಜಿಸಲಾಗಿದೆ. ಏತನ್ಮಧ್ಯೆ, ಈ ವರ್ಷ ಛತ್ತೀಸ್‌ಗಢದಲ್ಲಿ ನಡೆದ ಎನ್‌ಕೌಂಟರ್’ಗಳಲ್ಲಿ 268 ನಕ್ಸಲರು ಸಾವನ್ನಪ್ಪಿದ್ದಾರೆ. ಈ ಪೈಕಿ 239 ನಕ್ಸಲರು ಬಸ್ತಾರ್ ವಿಭಾಗದಲ್ಲಿ ಸಾವನ್ನಪ್ಪಿದ್ದಾರೆ . ಮಾರ್ಚ್ 31, 2026ರೊಳಗೆ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಇದರ ಅಡಿಯಲ್ಲಿ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನ ಮುಂದುವರೆಸಿವೆ.
BREAKING : ಮತ್ತೊಂದು ಭದ್ರತಾ ಲೋಪ ; ರಾಯ್ಪುರದಲ್ಲಿ ‘ವಿರಾಟ್ ಕೊಹ್ಲಿ’ ಪಾದ ಮುಟ್ಟಲು ಮುಂದಾದ ಮತ್ತೊಬ್ಬ ಅಭಿಮಾನಿ
BREAKING : ’24 MH-60R ಸೀಹಾಕ್ ಹೆಲಿಕಾಪ್ಟರ್’ ಖರೀದಿಗೆ US ಜೊತೆ ಭಾರತ $946 ಮಿಲಿಯನ್ ಒಪ್ಪಂದಕ್ಕೆ ಸಹಿ








