ಬೆಂಗಳೂರು: ಮಂಡ್ಯದ ಕಾವೇರಿ ನದಿ ತೀರದಲ್ಲಿ ನಡೆದಿರುವಂತ ಒತ್ತುವರಿ ತೆರವಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಆದೇಶಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕಾವೇರಿ ನದಿ ತೀರದಲ್ಲೇ ಅಕ್ರಮ ರೆಸಾರ್ಟ್, ಹೋಂಸ್ಟೇ ನಿರ್ಮಾಣ ಮಾಡಲಾಗಿದೆ. ಚಂದ್ರವನ ಆಶ್ರಮದ ಕಟ್ಟಡಗಳನ್ನೂ ನದಿ ತೀರದಲ್ಲೇ ನಿರ್ಮಿಸಲಾಗಿದೆ. ಸರ್ಕಾರ ಆಶ್ರಮದ ಕಟ್ಟಡಗಳಿಗೆ 4.07 ಕೋಟಿ ರೂ ವೆಚ್ಚ ಮಾಡಿದೆ. ನದಿ ಪಾತ್ರವನ್ನೇ ಬದಲಿಸುವಂತೆ ನಿರ್ಮಾಣ ಮಾಡಲಾಗಿದೆ ಎಂಬುದಾಗಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಕಳವಳ ವ್ಯಕ್ತ ಪಡಿಸಿದರು.
ಇದಲ್ಲದೇ ಕೋಟ್ಯಂತರ ಮೌಲ್ಯದ ಜಾಗ ಕಡಿಮೆ ಬೆಲೆಗೆ ಶಾಶ್ವತ ಗುತ್ತಿಗೆ ನೀಡಲಾಗಿತ್ತದೆ. ಕಂದಾಯ ಅಧಿಕಾರಿಗಳ ಕ್ರಮ ಆಘಾತಕಾರಿಯಾಗಿದೆ. ಕಾವೇರಿ ನದಿ ಬಫರ್ ವಲಯದಲ್ಲಿ ಹಲವು ಹೋಂ ಸ್ಟೇ, ರೆಸಾರ್ಟ್ ನಿರ್ಮಾಣವಾಗಿವೆ. ತೆರವಿಗೆ ಹಿಂದೆಯೇ ಸೂಚನೆಗಳನ್ನು ನೀಡಿದ್ದರೂ ಜಿಲ್ಲಾಡಳಿತ ಪಾಲಿಸಿಲ್ಲ ಎಂಬುದಾಗಿ ಮಂಡ್ಯ ಜಿಲ್ಲಾಡಳಿತದ ಬಗ್ಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಸಂಚಾರಕ್ಕೆ ಅಸ್ತು: 3-4 ತಿಂಗಳಲ್ಲಿ ಹೊಸ ರೈಲು ಸೇವೆಗೆ ಪ್ರಯತ್ನ
BREAKING ; ಸಂಚಾರ್ ಸಾಥಿ ಅಪ್ಲಿಕೇಶನ್ ‘ಪೂರ್ವ-ಸ್ಥಾಪನೆ’ ಕಡ್ಡಾಯ ಆದೇಶ ರದ್ದುಗೊಳಿಸಿದ ಕೇಂದ್ರ ಸರ್ಕಾರ








