ಬೆಂಗಳೂರು: ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಬೆಂಗಳೂರಿನಿಂದ ಬಾಗಲಕೋಟೆಗೆ ಹೊಸದಾಗಿ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರಿನಿಂದ ಬಾಗಲಕೋಟೆಗೆ ಹೊಸದಾಗಿ ಎಸಿ ಸ್ಲೀಪರ್ ಬಸ್ ಸೇವೆ ಪ್ರಾರಂಭವಾಗಲಿದೆ. ಇದರ ಸದುಪಯೋಗವನ್ನು ಪ್ರಯಾಣಿಕರು ಪಡೆಯುವಂತೆ ಮನವಿ ಮಾಡಿದೆ.
ಹೀಗಿದೆ ಬಸ್ ಸಂಚಾರದ ವೇಳಾಪಟ್ಟಿ
ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಡಲಿದೆ. ಬಾಗಲಕೋಟೆಯನ್ನು ಮರು ದಿನ ಬೆಳಗ್ಗೆ 5.15ಕ್ಕೆ ತಲುಪಲಿದೆ.
ಇನ್ನೂ ಬಾಗಲಕೋಟೆಯಿಂದ ರಾತ್ರಿ 9 ಗಂಟೆಗೆ ಬಸ್ ಹೊರಟು, ಬೆಂಗಳೂರನ್ನು ಬೆಳಗ್ಗೆ 5.15ಕ್ಕೆ ತಲುಪಲಿದೆ. ಒಂದೊಂದು ಕಡೆಯಿಂದಲೂ ಬರೋಬ್ಬರಿ 498 ಕಿಲೋಮೀಟರ್ ದೂರವಾಗಲಿದೆ.
ಬೆಂಗಳೂರು, ತುಮಕೂರು, ಚಿತ್ರದುರ್ಗ, ಹೊಸಪೇಟೆ, ಕುಷ್ಟಗಿ, ಇಳಕಲ್, ಹುನಗುಂದ ಮಾರ್ಗವಾಗಿ ಬಾಗಲಕೋಟೆಯನ್ನು ಹೊಸ ಎಸಿ ಸ್ಲೀಪರ್ ಬಸ್ ತಲುಪಲಿದೆ.
ಹೀಗಿದೆ ಟಿಕೆಟ್ ದರ
- ಬೆಂಗಳೂರು ಟು ಹೊಸಪೇಟೆಗೆ ರೂ.900
- ಬೆಂಗಳೂರು ಟು ಕುಷ್ಟಗಿ ರೂ.1033
- ಬೆಂಗಳೂರು ಟು ಹುನುಗುಂದ ರೂ.1152
- ಬೆಂಗಳೂರು ಟು ಬಾಗಲಕೋಟೆ ರೂ.1246
ಬೆಂಗಳೂರಿನಿಂದ ಬಾಗಲಕೋಟೆಗೆ ತೆರಳುವಂತ ಸಾರಿಗೆ ಬಸ್ ಪ್ರಯಾಣಿಕರು ಟಿಕೆಟ್ ಗಳನ್ನು ಮುಂಗಡವಾಗಿ www.ksrtc.in ಮೂಲಕವೂ ಆನ್ ಲೈನ್ ನಲ್ಲಿಯೂ ಖರೀದಿಸಬಹುದಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ಟಿ20ಐ ತಂಡ ಪ್ರಕಟ: ಶುಭಮನ್ ಗಿಲ್ ಕಂ ಬ್ಯಾಕ್ | Shubman Gill
BREAKING ; ಸಂಚಾರ್ ಸಾಥಿ ಅಪ್ಲಿಕೇಶನ್ ‘ಪೂರ್ವ-ಸ್ಥಾಪನೆ’ ಕಡ್ಡಾಯ ಆದೇಶ ರದ್ದುಗೊಳಿಸಿದ ಕೇಂದ್ರ ಸರ್ಕಾರ








