ಬೆಂಗಳೂರು : ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಬ್ರೇಕ್ ಪೋಸ್ಟ್ ಗೆ ಎಂದು ಬಂದಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈಯಲ್ಲಿ ಇರುವ ಒಂದೇ ಬ್ರಾಂಡ್ ವಾಚ್ ಎಲ್ಲರ ಗಮನ ಸೆಳೆದಿತ್ತು.
ಇನ್ನು ಸಿಎಂ ಮತ್ತು ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಟೀಕೆ ಮಾಡಿರುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು 24 ಲಕ್ಷ ರೂಪಾಯಿ ಕೊಟ್ಟು ಈ ಗಡಿಯಾರ ನಾನೇ ಖರೀದಿ ಮಾಡಿದ್ದೇನೆ ನನ್ನದೇ ಕ್ರೆಡಿಟ್ ಕಾರ್ಡ್ ಕೊಟ್ಟು ಖರೀದಿಸಿದ್ದೇನೆ ಚೆಕ್ ಮಾಡಬಹುದು ಎಲೆಕ್ಷನ್ ಅಫೀಡಿವೇಟ್ ನಲ್ಲೂ ಕೂಡ ತೋರಿಸಿದ್ದೇನೆ ಎಂದರು.
ಇನ್ನು ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ಗುರಿಯಾಗಿಸಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ನನಗೆ ಅದರ ಬಗ್ಗೆ ಗೊತ್ತಿಲ್ಲ ಸಿಎಂ ಸಿದ್ದರಾಮಯ್ಯ ಅವರಿಗೆ ವಾಚ್ ಹಾಕಿಕೊಳ್ಳುವ ಅಧಿಕಾರವಿದೆ ಸಿಎಂ ಸಿದ್ದರಾಮಯ್ಯ ಅವರಿಗೆ ವಾಜ್ ಖರೀದಿಸುವ ತಾಕತ್ತು ಕೂಡ ಇದೆ ನನ್ನ ತಂದೆ ಏಳು ಗಡಿಯಾರಗಳನ್ನು ಬಿಟ್ಟು ಹೋಗಿದ್ದಾರೆ ನಾನು ಇಲ್ಲವೇ ನನ್ನ ಸಹೋದರ ವಾಚ್ ಹಾಕಿಕೊಳ್ಳಬೇಕು ಅಲ್ಲವೇ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.








