ಮಂಡ್ಯ : ಇಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನ ಯಾತ್ರೆ ನಡೆಯಿತು. ಜಾಮಿಯಾ ಮಸೀದಿ ಮುಂದೆ ಕುಳಿತು ಹನುಮ ಮಾಲಾಧಾರಿಗಳು ಭಜನೆ ಮಾಡಿದರು. ಈ ವೇಳೆ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡೆ ಅವರು ಹನುಮ ಮಾಲಾಧಾರಿಗಳ ಮನವೊಲಿಸಿದರು.
ಬಳಿಕ ಮಾಲಾಧಾರಿಗಳು ಎಸ್ ಪಿ ಮನೋವೊಲಿಕೆಗೆ ನಂತರ ಮುಂದೆ ಸಾಗಿದರು. ಜಾಮಿಯಾ ಮಸೀದಿ ವೃತದಿಂದ ಹನುಮ ಮಾಲಾಧಾರಿಗಳು ಮುಂದೆ ಸಾಗಿದರು ಕೆಲವೇ ನಿಮಿಷಗಳಲ್ಲಿ ರಂಗನಾಥ ಸ್ವಾಮಿ ದೇವಾಲಯ ಬಳಿ ಯಾತ್ರೆ ಸಮಾಪ್ತಿ ಆಗಲಿದೆ. ಈ ವೇಳೆ ಜಾಮಿಯಾ ಮಸೀದಿ ಜಾಗ ನಮ್ಮದು ಎಂದು ಮಾಲಾಧಾರಿಗಳು ಘೋಷಣೆ ಕೂಗಿದರು.
ಮಸೀದಿ ವೃತದಲ್ಲೇ ಹನುಮ ಮಾಲಾಧಾರಿಗಳು ಘೋಷಣೆ ಕೂಗುತ್ತಿದ್ದರು. ಈ ವೇಳೆ ಕೆಲವು ಹನುಮ ಮಾಲಾಧಾರಿಗಳು ಜಾಮಿಯ ಮಸೀದಿಗೆ ಹೋಗಲು ಯತ್ನಿಸಿದರು. ಪೊಲೀಸರು ಹಾಗೂ ಹನುಮ ಮಾಲಾಧಾರಿಗಳ ನಡುವೆ ಈ ಬೆಳೆ ವಾಗ್ವಾದ ನಡೆಯಿತು. ಹರಸಾಹಸ ಪಟ್ಟು ಮಾಲದಾರಿಗಳನ್ನು ಪೊಲೀಸರು ಮುಂದೆ ಕಳುಹಿಸಿದರು.








