ಶಿವಮೊಗ್ಗ: ರಾಜ್ಯದಲ್ಲೊಂದು ಮನಕಲಕುವ ಘಟನೆ ಎನ್ನುವಂತ ಮದುವೆಯಾದ ಮರುದಿನವೇ ಹೃದಯಾಘಾತದಿಂದ ನವವಿವಾಹಿತ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಈ ಘಟನೆ ನಡೆದಿದೆ. ಮದುವೆಯಾದ ಮರು ದಿನವೇ ನವವಿವಾಹಿತ ರಮೇಶ್(30) ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ನವೆಂಬರ್.30ರಂದು ಹರಪ್ಪನಹಳ್ಳಿ ಸಮೀಪದ ಬಂಡ್ರಿಯ ಮಧುವನ್ನು ರಮೇಶ್ ಅವರು ಮದುವೆಯಾಗಿದ್ದರು. ಆದರೇ ಮನಕಲಕುವ ಘಟನೆ ಎನ್ನುವಂತೆ ಡಿಸೆಂಬರ್.1ರಂದು ರಮೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮದುವೆಯಾದ ಬಳಿಕ ರಮೇಶ್ ವಧುವಿನ ಮನೆಗೆ ತೆರಳಿದ್ದರು. ಅಲ್ಲಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ವಧು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ವಧುವಿನ ಮನೆಗೆ ತಲುಪಿದ ನಂತ್ರ ರಮೇಶ್ ದಂಪತಿಗಳು ದೇವರಿಗೆ ಕೈ ಮುಗಿಯುಲು ತೆರಳಿದ ವೇಳೆಯಲ್ಲೇ ಕುಸಿದು ಬಿದ್ದಿದ್ದರು, ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ವೇಳೆಯಲ್ಲೇ ಮಾರ್ಗ ಮಧ್ಯೆ ಕೊನೆಯುಸಿರು ಎಳೆದಿದ್ದಾರೆ. ರಮೇಶ್ ಅಂತ್ಯಕ್ರಿಯೆಯನ್ನು ಮಂಗಳವಾರದಂದು ನೆರವೇರಿಸಲಾಗಿದೆ.
BREAKING: ಡಿ.14ರಂದು ಮತಗಳ್ಳತನ ವಿರುದ್ಧ ದೆಹಲಿಯಲ್ಲಿ ಸಮಾವೇಶ ಆಯೋಜನೆ: ಡಿಸಿಎಂ ಡಿ.ಕೆ ಶಿವಕುಮಾರ್
SHOCKING : ಕಳ್ಳತನದ ಆರೋಪ ಸಹಿಸಲಾಗದೇ `SSLC’ ವಿದ್ಯಾರ್ಥಿ ಆತ್ಮಹತ್ಯೆ.!








