ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಿನನಿತ್ಯ ಸುಮಾರು 1.3 ಲಕ್ಷ ಪ್ರಯಾಣಿಕರು ಮತ್ತು 1 ಲಕ್ಷ ವಾಹನಗಳ ಸಂಚಾರವಿರುವ ದೇಶದ ಮೂರನೇ ಅತಿದೊಡ್ಡ ನಿಲ್ದಾಣ. ನಿತ್ಯವೂ ಟ್ರಾಫಿಕ್‌ನಿಂದ ಕೂಡಿರರುತ್ತದೆ. ಈ ಸಮಸ್ಯೆ ಬಗೆಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಡಿ.8ರಿಂದ ಜಾರಿಗೆ ಬರುವಂತೆ ಹೊಸ ಪಿಕ್-ಅಪ್ ನಿಯಮಗಳನ್ನು ಜಾರಿ ಮಾಡಲಾಗಿದೆ.
ಹೌದು ಡಿಸೆಂಬರ್8ರಿಂದ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಹೊಸ ನಿಯಮ ಜಾರಿ ಆಗಲಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್ ದಂಡಸ್ತ್ರ ಜಾರಿಗೊಳಿಸಲಾಗುತ್ತಿದೆ. ಸೈಡ್ ಪಿಕಪ್ ಹಾವಳಿ ಹಾಗೂ ಟ್ರಾಫಿಕ್ ನಿಯಂತ್ರಿಸಲು ಹೊಸ ನಿಯಮ ಜಾರಿಗೆ ಆಗಲಿದೆ. ಏರ್ಪೋರ್ಟ್ ನ ಅರೈವಲ್ ಗೇಟ್ ಮುಂಭಾಗ ಹೊಸ ರೂಲ್ಸ್ ಜಾರಿಯಾಗಲಿದೆ ಟರ್ಮಿನಲ್ ಒಂದು ಮತ್ತು ಎರಡರ ಮುಂಭಾಗ ವಾಹನಗಳು ಅವದಿvಮೀರಿ ನಿಂತರೆ ದಂಡ ವಿಧಿಸಲಾಗುತ್ತದೆ. ವೈಟ್ ಬೋರ್ಡ್ ಹಳದಿ ಬೋರ್ಡ್ ವಾಹನಗಳಿಗೆ ಪಿಕಪ್ ಪಾಯಿಂಟ್ ಹಾಗೂ ಟರ್ಮಿನಲ್ ಒಂದರ ಮುಂಭಾಗ ಕೇವಲ ವೈಟ್ ಬೋರ್ಡ್ ವಾಹನಗಳಿಗೆ ಪಿಕಪ್ ಗೆ ಅವಕಾಶ ಕಲ್ಪಿಸಲಾಗಿದೆ.
ಯೆಲೋ ಬೋರ್ಡ್ ವಾಹನಗಳಿಗೆ ಪಾರ್ಕಿಂಗ್ ಮೂರು ಮತ್ತು ನಾಲ್ಕರಲ್ಲಿ ಅವಕಾಶ ಕಲ್ಪಿಸಲಾಗಿದ್ದು ಪಿಕ್ ಅಪ್ ಗೆ ಬರುವ ವೈಟ್ ಬೋರ್ಡ್ ವಾಹನಗಳಿಗೆ ಮೊದಲು 8 ನಿಮಿಷ ಹಾಗೂ ಹಳದಿ ಬೋರ್ಡ್ ವಾಹನಗಳಿಗೆ 10 ನಿಮಿಷಗಳ ಕಾಲ ಉಚಿತ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ ಉಚಿತ ಪಾರ್ಕಿಂಗ್ ಅವಧಿ ಮೀರಿದರೆ ಮೊದಲು 8 ರಿಂದ 13 ನಿಮಿಷಕ್ಕೆ 150 ರೂಪಾಯಿ ತಂಡ 13 ನಿಮಿಷದಿಂದ 18 ನಿಮಿಷ ಪಾರ್ಕಿನಲ್ಲಿ ಇದ್ದರೆ 300 ತಂಡ ವಿಧಿಸಲಾಗುತ್ತದೆ 18 ನಿಮಿಷ ಮೇರಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಡಿಸೆಂಬರ್ 8 ರಿಂದ ನೂತನ ಪಾರ್ಕಿಂಗ್ ನಿಯಮ ಜಾರಿಯಾಗಲಿದೆ.
ಬಿಳಿ ಬೋರ್ಡ್(ಖಾಸಗಿ) ವಾಹನಕ್ಕಿರುವ ನಿಯಮವೇನು?
ಟರ್ಮಿನಲ್-1 ಮತ್ತು ಟರ್ಮಿನಲ್-2ರ ಆಗಮನ ಪಿಕ್-ಅಪ್ ವಲಯಕ್ಕೆ ಬರುವ ಖಾಸಗಿ ಕಾರುಗಳಿಗೆ ಅಂತರರಾಷ್ಟ್ರೀಯ ಮಾನದಂಡಕ್ಕಿಂತ ಹೆಚ್ಚಾಗಿ, ಅಂದರೆ ಮೊದಲ 8 ನಿಮಿಷಗಳ ಕಾಲ ಉಚಿತ ಪ್ರವೇಶ ಕಲ್ಪಿಸಲಾಗಿದೆ.
8 ರಿಂದ 13 ನಿಮಿಷದವರೆಗೆ: ವಾಹನ ನಿಲ್ಲಿಸಿದರೆ 150ರೂ. ಶುಲ್ಕ.
13 ರಿಂದ 18 ನಿಮಿಷದವರೆಗೆ: ವಾಹನ ನಿಲ್ಲಿಸಿದರೆ 300ರೂ. ಶುಲ್ಕ.
18 ನಿಮಿಷಕ್ಕೂ ಹೆಚ್ಚು ಕಾಲ ಏರ್ಪೋರ್ಟ್‌ನಲ್ಲೇ ವಾಹನ ನಿಂತಿದ್ದರೆ ಅಂತಹ ಗಾಡಿಗಳನ್ನು ಜಪ್ತಿ ಮಾಡಿ, ಪೊಲೀಸ್ ಠಾಣೆಗೆ ರವಾನೆ ಮಾಡಲಾಗುವುದು. ಮಾಲೀಕರು ದಂಡದ ಜೊತೆಗೆ ಟೋಯಿಂಗ್ ಶುಲ್ಕವನ್ನೂ ಕಟ್ಟಬೇಕಾಗುವ ಪರಿಸ್ಥಿತಿ ಇರಲಿದೆ.
ವಾಣಿಜ್ಯ ವಾಹನಗಳಿಗೆ (ಹಳದಿ ಬೋರ್ಡ್) ನಿಯಮಗಳೇನು?
ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಸೇರಿ ಮುಂದೆ ಎಲ್ಲಾ ವಾಣಿಜ್ಯ ವಾಹನಗಳಿಗೆ ಮೊದಲ 10 ನಿಮಿಷ ಉಚಿತ ಪಾರ್ಕಿಂಗ್ ಅವಕಾಶವಿದೆ. ಆದರೆ, ಇವು ನಿಗದಿಪಡಿಸಿದ ಸ್ಥಳದಲ್ಲಿಯೇ ಪ್ರಯಾಣಿಕರಿಗೆ ಕಾಯಬೇಕು ಎಂದು ನಿಯಮ ರೂಪಿಸಲಾಗಿದೆ.
ಟರ್ಮಿನಲ್ 1: ವಾಣಿಜ್ಯ ವಾಹನಗಳು P4 ಮತ್ತು P3 ಪಾರ್ಕಿಂಗ್ ವಲಯಕ್ಕೆ ತೆರಳಬೇಕು.
ಟರ್ಮಿನಲ್ 2: ವಾಣಿಜ್ಯ ವಾಹನಗಳು P2 ಪಾರ್ಕಿಂಗ್ ವಲಯಕ್ಕೆ ತೆರಳಬೇಕು.








