ಹೈದರಾಬಾದ್: ಹಿಂದುಗಳಲ್ಲಿ ಕುಡುಕರಿಗೊಬ್ಬ ದೇವರಿದ್ದಾನೆ. ಒಬ್ಬರು ಅವಿವಾಹಿತರಿಗಾದರೆ, ಇನ್ನೊಬ್ಬರು ಕೋಳಿ ಬಲಿ ಕೊಡಲು, ಮತ್ತೊಬ್ಬರು ಸಾರಾಯಿ ಕುಡಿಯಲು’ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ಹಿಂದುಗಳಲ್ಲಿ 3 ಕೋಟಿ ದೇವರುಗಳು ಏಕಿದ್ದಾರೆ? ಹಿಂದುಗಳು ಎಷ್ಟು ದೇವರನ್ನು ನಂಬುತ್ತಾರೆ? 3 ಕೋಟಿ ದೇವರುಗಳಿವೆಯೇ? ಇಷ್ಟೊಂದು ಏಕೆ ಅಸ್ತಿತ್ವದಲ್ಲಿವೆ? ಅವಿವಾಹಿತರಿಗೆ ಒಬ್ಬ ದೇವರು ಹನುಮಾನ್. ಎರಡು ಮದುವೆಯಾಗುವವರಿಗೆ ಇನ್ನೊಬ್ಬ ದೇವರು, ಮದ್ಯಪಾನ ಮಾಡುವವರಿಗೊಬ್ಬ, ಕೋಳಿ ಬಲಿಗೆ ಒಬ್ಬ, ಬೇಳೆ ಮತ್ತು ಅನ್ನಕ್ಕೆ ಒಬ್ಬ ದೇವರಿನಿದ್ದಾನೆ. ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರಿದ್ದಾನೆ.. ಈ ರೀತಿ ವಿಭಿನ್ನ ಮನಸ್ಥಿತಿಯವರು ಇದ್ರೂ ಕಾಂಗ್ರೆಸ್ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತದೆ’ ಎಂದು ಹೇಳಿದ್ದಾರೆ.
ಇನ್ನು ಸಿಎಂ ರೇವಂತ್ ರೆಡ್ಡಿ ಹೇಳಿಕೆಯಿಂದ ಹಿಂದೂಗಳಿಗೆ ಅವಮಾನವಾಗಿದೆ. ಅವರು ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಹಾಗೂ ಬಿಆರ್‌ಎಸ್ ಆಗ್ರಹಿಸಿವೆ.








