ಶಿವಮೊಗ್ಗ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ( NHM) ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೊಸ ಹೆಚ್ ಆರ್ ಪಾಲಿಸಿ ಜಾರಿಗೊಳಿಸೋದಕ್ಕೆ ಮುಂದಾಗಿತ್ತು. ಈ ಬಗ್ಗೆ ನೌಕರರು ಆತಂಕ ವ್ಯಕ್ತಪಡಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿದ್ದರು. ಅವರು ಏನು ಹೇಳಿದ್ರು ಅಂತ ಮುಂದೆ ಓದಿ.
ರಾಜ್ಯ ಆರೋಗ್ಯ ಇಲಾಖೆಯಿಂದ ಜಾರಿಗೆ ತರಲು ಹೊರಟಿರುವಂತ ನೂತನ ಹೆಚ್ ಆರ್ ಪಾಲಿಸಿ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದಂತ KSHCOEA BMS ಸಾಧಕ-ಬಾಧಕಗಳನ್ನು ಗಮನಿಸಿ ಜಾರಿಗೊಳಿಸುವಂತೆ ಮನವಿ ಮಾಡಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈ ವಿಷಯ ಪ್ರಸ್ತುತ ಪ್ರಸ್ತಾವನೆ (Proposal) ಹಂತದಲ್ಲಿದ್ದು, ಇದರ ಸಾಧಕ–ಬಾಧಕಗಳನ್ನು ಸಮಗ್ರವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂಬುದಾಗಿ ತಿಳಿಸಿದ್ದಾರೆ. ಆ ಮೂಲಕ ನೌಕರರ ಮನವಿಗೆ ಸಕಾರಾತ್ಮಕವಾಗಿಯೇ ಪ್ರತಿಸ್ಪಂದಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಸಮಿತಿಯವರು ಸುಮಾರು 18-20 ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕರಿಗೆ ಸೇವೆ ನೀಡುತ್ತಾ ಬಂದಿದ್ದೇವೆ, ಈಗ ಏಕಾಏಕಿ ಮರು ನೇಮಕಾತಿ ಮಾಡಿದ್ದಲ್ಲಿ 70% ಪ್ರಸ್ತುತ ಕೆಲಸ ಮಾಡುವ ಸಿಬ್ಬಂದಿಗಳು ಕೆಲಸ ಕಳೆದುಕೊಂಡು ಬೀದಿಗೆ ಬರುವುದು ಗ್ಯಾರೆಂಟಿ, ಇನ್ನೂ ಕಡಿಮೆ ವೇತನದಲ್ಲಿ ಅವರವರ ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದು, ಕಡ್ಡಾಯ ವರ್ಗಾವಣೆ ಮಾಡಿದಲ್ಲಿ ಸಿಬ್ಬಂದಿ ಸಹಿತ ಪೂರ್ತಿ ಕುಟುಂಬ ಆರ್ಥಿಕವಾಗಿ ದುರ್ಬಲರಾಗಿ ಆಗಲು ಸಹ ಬೀದಿಗೆ ಬರುತ್ತಾರೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.
ಅವಶ್ಯಕತೆ ಇರುವ ಸಿಬ್ಬಂದಿಗಳಿಗೆ ಮಾತ್ರ ಮನವಿ ಮೇರೆಗೆ ಹಾಗೂ ಪರಸ್ಪರ ವರ್ಗಾವಣೆಯನ್ನು ಮಾತ್ರ ಪರಿಗಣಿಸಲು HR ಪಾಲಿಸಿ ಮಾಡಲು ವಿನಂತಿ ಮಾಡಲಾಯಿತು, ಒಂದು ವೇಳೆ ಕಡ್ಡಾಯ ವರ್ಗಾವಣೆ ಮಾಡುವುದೇ ಆದಲ್ಲಿ, ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯಗಳನ್ನು ನೀಡಿ ವೇತನ ಹೆಚ್ಚಿಸಿ ಖಾಯಂ ಮಾಡಿ ನಂತರ ವರ್ಗಾವಣೆ ಮಾಡಲು ವಿನಂತಿ ಮಾಡಲಾಯಿತು.
ಈ ಪ್ರಸ್ತಾಪವನ್ನು ರದ್ದುಪಡಿಸುವ ನಿಟ್ಟಿನಲ್ಲಿ ಹೋರಾಟದಲ್ಲಿ ಎಲ್ಲಾ ಸಿಬ್ಬಂದಿಗಳು ಒಗ್ಗಟ್ಟಿನಿಂದ ಸಂಘಟಿತರಾಗಿ ಹೋರಾಟ ನಡೆಸುವುದು ಅತ್ಯಾವಶ್ಯಕವಾಗಿದೆ. ಎಲ್ಲರೂ ಏಕಮನಸ್ಸಿನಿಂದ ಹೋರಾಟ ಮುಂದುವರಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಸಿಬ್ಬಂದಿಗಳಿಗೆ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಸ್ವಾಮಿ ಕರೆ ನೀಡಿದ್ದರು.
ಇಂದು ಮನವಿ ಸಲ್ಲಿಸುವ ವೇಳೆ ಭಾಗವಹಿಸಿದ್ದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಹಾಗೂ ಎಲ್ಲಾ ಎನ್.ಎಚ್.ಎಂ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಶಿವಮೊಗ್ಗ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.








