ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಹಾಕಿದ್ದು, ಇದೀಗ ಶಾಸಕ ಅಜೇಯ್ ಸಿಂಗ್ ಹೊಸ ಬಾಂಬ್ ಸಿಡಿಸಿದ್ದು, ಜನೆವರಿ ಇಲ್ಲ ಫೆಬ್ರವರಿ ಅಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ಜನೆವರಿ ಫೆಬ್ರವರಿ ಅಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ಆಗಬಹುದು. ಎಲ್ಲವು ಹೈಕಮಾಂಡ್ ಅಂಗಳದಲ್ಲಿದೆ. ಅವರ ಕೈಯಲ್ಲಿದೆ.ನಿನ್ನೆ ಸೋನಿಯಾ, ರಾಹುಲ್, ಖರ್ಗೆ ಸೇರಿ ಸಭೆ ಮಾಡಿದ್ದಾರೆ. ಅವರೆಲ್ಲ ಸೇರಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮತ್ತೆ ಒಂದು ಸಲ ಕುಳಿತು ಮಾತನಾಡುತ್ತಾರೆ ಎಂದರು.
ಜನೆವರಿ, ಫೆಬ್ರವರಿ ಬದಲಾವಣೆ ಆಗಬಹುದು. ಎಲ್ಲರು ಕುಳಿತು ಮಾತನಾಡುತ್ತಾರೆ. ಆದರೆ ಈಗ ತೊಂದರೆ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಆಗಲೇಬೇಕು. ಸಿಎಂ ಡಿಸಿಎಂ ಪ್ರೆಸ್ ಮೀಟ್ ಮಾಡಿದ್ದಾರೆ. ಅಂದ್ರೆ ತೊಂದರೆ ಇಲ್ಲ ಎಂದರು. ಆದರೆ ಈ ಸಿಎಂ ಖರ್ಚಿ ಫೈಟ್ ನಡುವೆ ಶಾಸಕ ಅಜಯ್ ಸಿಂಗ್ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಆಗಲೇಬೇಕು…
ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿ ಆಗಬಹುದು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಎಲ್ಲಾರು ಕುಳಿತು ಮಾತನಾಡುತ್ತಾರೆ.. ಈಗ ತೊಂದರೆ ಇಲ್ಲ, ಈಗ ಸಿಎಂ ಡಿಸಿಎಂ ಪ್ರೆಸ್ ಮೀಟ್ ಮಾಡಿದ್ದಾರೆ ಅಂದ್ರೆ ತೊಂದರೆ ಇದೆ ಅಂತ ಈ ಬಗ್ಗೆ ಹೈಕಮಾಡ್ ನಿರ್ಧಾರ ಮಾಡುತ್ತೆ ಎಂದರು..








