ರಾಯಚೂರು : ರಾಯಚೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಲಾರಿ ಹರಿದು ರಸ್ತೆ ಬದಿ ನಿಂತಿದ್ದ ತಂದೆ ಮಗ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ರಾಯಚೂರು ನಗರದ ಹೊರವಲಯದ ಯರಮರಸ್ ಬೈಪಾಸ್ ನಲ್ಲಿ ಈ ಒಂದು ಘಟನೆ ಸಂಭವಿಸಿದೆ.
ತಂದೆ ನಾಗಪ್ಪ (65) ಹಾಗೂ ಪುತ್ರ ರಮೇಶ್ (46) ಸ್ಥಳದಲ್ಲಿ ಸಾವನಪ್ಪಿದ್ದಾರೆ. ರಸ್ತೆ ಬದಿ ಮೊಬೈಲ್ನಲ್ಲಿ ತಂದೆ ಭಾಗ ಮಾತನಾಡುತ್ತ ನಿಂತಿದ್ದರು. ಏಕಾಏಕಿ ವೇಗವಾಗಿ ಬಂದಂತಹ ಲಾರಿ ಇಬ್ಬರ ಮೇಲೆ ಹರಿದು ದೇಹಗಳು ಛಿದ್ರ ಛಿದ್ರವಾಗಿವೆ. ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.








