ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರವು ಪ್ರಸ್ತುತ 43 ವಲಯಗಳ ಅಸಂಘಟಿತ ಕಾರ್ಮಿಕರನ್ನು ಗುರುತಿಸಿದ್ದು, 2017-18ನೇ ಸಾಲಿನಲ್ಲಿ “ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ”ಯನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಅನುಷ್ಠಾನಗೊಳಿಸುತ್ತಿದೆ. ಸದರಿ ಯೋಜನೆಯಡಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
(ಅ) ಸ್ಮಾರ್ಟ್ ಕಾರ್ಡ್ ಸೌಲಭ್ಯ:
* 2017-18ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ, 5 ಅಸಂಘಟಿತ ವಲಯಗಳಾದ “ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೈಲರ್‌ಗಳು ಹಾಗೂ ಮೆಕ್ಯಾನಿಕ್” ಕಾರ್ಮಿಕರನ್ನು ಏಕ ಶೀರ್ಷಿಕೆ ಮತ್ತು ಏಕ ಚಿಹ್ನೆಯಡಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ.
← 2018-19ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ, 6 ಅಸಂಘಟಿತ ವಲಯಗಳಾದ “ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಹಾಗೂ ಭಟ್ಟಿ ಕಾರ್ಮಿಕ”ರನ್ನೂ ಸಹ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ.
ಷರತ್ತುಗಳು:
ಈ ಯೋಜನೆಯು ಕರ್ನಾಟಕ ರಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ.
ವಯೋಮಿತಿ 18 ರಿಂದ 60 ವರ್ಷಗಳು.
ಪ್ರಸ್ತುತ ಮೇಲ್ಕಂಡ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಅನ್ವಯಿಸುತ್ತದೆ.
ಸ್ಮಾರ್ಟ್ ಕಾರ್ಡ್ ಪಡೆಯುವ ವಿಧಾನ:
ಫಲಾನುಭವಿಯು ನಿಗದಿತ ಸ್ವಯಂಘೋಷಣಾ ಪ್ರಮಾಣಪತ್ರವುಳ್ಳ ಅರ್ಜಿಯನ್ನು ಭರ್ತಿ ಮಾಡಿ ಸ್ಥಳೀಯ ಕಾರ್ಮಿಕ ಅಧಿಕಾರಿಗಳ ಕಛೇರಿಗೆ ಅಥವಾ ಕಾರ್ಮಿಕ ಸೇವಾ ಕೇಂದ್ರ ಅಥವಾ ನೇರವಾಗಿ ಮಂಡಳಿಗೆ ಸಲ್ಲಿಸಬಹುದು.
ಭರ್ತಿ ಮಾಡಿದ ಅರ್ಜಿಯೊಂದಿಗೆ ಫಲಾನುಭವಿಯು ಇತ್ತೀಚಿನ ಎರಡು ಭಾವಚಿತ್ರಗಳು, ಆಧಾರ್‌ಕಾರ್ಡ್ ಸ್ವಯಂದೃಢೀಕೃತ ಪ್ರತಿ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ಲಗತ್ತಿಸುವುದು.
ಮಂಡಳಿಯ ವತಿಯಿಂದ ಸ್ವಯಂಘೋಷಣಾ ಪ್ರಮಾಣಪತ್ರವನ್ನು ಮುದ್ರಿಸಿದ್ದು, ಸದರಿ ಅರ್ಜಿಗಳು ಮಂಡಳಿಯಲ್ಲಿ, ಕಾರ್ಮಿಕ ಇಲಾಖಾ ಕಛೇರಿಗಳು ಮತ್ತು ಕಾರ್ಮಿಕ ಸೇವಾ ಕೇಂದ್ರಗಳಲ್ಲಿ ಲಭ್ಯವಿರುತ್ತವೆ.
ಅರ್ಜಿಗಳನ್ನು ಕಾರ್ಮಿಕ ಸಂಘಟನೆಗಳು ಅಥವಾ ಖುದ್ದಾಗಿ ಕಾರ್ಮಿಕರೇ ಉಚಿತವಾಗಿ ಪಡೆಯಬಹುದು.
ಅರ್ಜಿಯನ್ನು ಭರ್ತಿ ಮಾಡಲು ಹಾಗೂ ಸ್ಮಾರ್ಟ್ ಕಾರ್ಡ್ ಪಡೆಯಲು ಕಾರ್ಮಿಕ ಸೇವಾ ಕೇಂದ್ರದಲ್ಲಿರುವ ಕಾರ್ಮಿಕ ಬಂಧುಗಳ ಸಹಾಯ ಪಡೆಯಬಹುದು.
ಸ್ಮಾರ್ಟ್ ಕಾರ್ಡ್ ಪಡೆಯುವ ಸಂದರ್ಭದಲ್ಲಿ ಫಲಾನುಭವಿಯು ರೂ.25/-ಗಳ ನೋಂದಣಿ ಶುಲ್ಕವನ್ನು ಪಾವತಿಸುವುದು.
ಮಂಡಳಿಯಿಂದ ಪ್ರಸ್ತುತ ಜಾರಿಯಲ್ಲಿರುವ ಯೋಜನೆಯ ಸೌಲಭ್ಯ ಹಾಗೂ ಭವಿಷ್ಯದಲ್ಲಿ ರೂಪಿಸಲಾಗುವ ಯೋಜನೆಗಳ ಸೌಲಭ್ಯವನ್ನು ಕಡ್ಡಾಯವಾಗಿರುತ್ತದೆ. ಪಡೆಯಲು ಸ್ಮಾರ್ಟ್ ಕಾರ್ಡ್
(ಆ) ಶ್ರಮ ಸಮ್ಮಾನ ಹಾಗೂ ವಿಶೇಷ ಪುರಸ್ಕಾರ ಪ್ರಶಸ್ತಿ:
* ಪ್ರತಿ ವರ್ಷ ಮಾರ್ಚ್ 1 ರಂದು “ಕಾರ್ಮಿಕ ಸಮ್ಮಾನ ದಿನವನ್ನು ಆಚರಣೆ ಮಾಡಲಾಗುವುದು.
ಸದರಿ ಸಂದರ್ಭದಲ್ಲಿ ಆಯ್ದ ಅಸಂಘಟಿತ ವಲಯಗಳ ಕಾರ್ಮಿಕರು ನೀಡಿದ ಸೇವೆಯನ್ನು ಗುರುತಿಸಿ, ಪ್ರತಿಯೊಂದು ಜಿಲ್ಲೆಗೆ ಪ್ರತಿ ವಲಯಕ್ಕೆ ತಲಾ ಒಂದು ಶ್ರಮ ಸಮ್ಮಾನ ಪ್ರಶಸ್ತಿ ಹಾಗೂ 10 ವಿಶೇಷ ಪುರಸ್ಕಾರ ನೀಡಲಾಗುವುದು.
* ಶ್ರಮ ಸಮ್ಮಾನ ಪ್ರಶಸ್ತಿ ರೂ.10,000/-ಗಳ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಶಂಸಾ ಪತ್ರ.
← ವಿಶೇಷ ಪುರಸ್ಕಾರ ರೂ.1,000/-ಗಳ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಶಂಸಾ ಪತ್ರ.
* ಪ್ರಸಕ್ತ ಸಾಲಿನಲ್ಲಿ, ಅಸಂಘಟಿತ ವಲಯಗಳಾದ “ಹಮಾಲರು, ಮನೆಗೆಲಸದವರು, ಚಿಂದಿ ಆಯುವವರು, ಟೈಲರ್ಸ್, ಮೆಕ್ಯಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕ ಹಾಗೂ ಖಾಸಗಿ ವಾಣಿಜ್ಯ ವಾಹನ ಚಾಲಕರು” ಪ್ರಶಸ್ತಿಗಾಗಿ ಅರ್ಜಿಯನ್ನು ಸಲ್ಲಿಸಬಹುದು.
* ಮಂಡಳಿಯ ವತಿಯಿಂದ ನಿಗದಿತ ನಮೂನೆ ಅರ್ಜಿಗಳನ್ನು ಮುದ್ರಿಸಿದ್ದು, ಸದರಿ ಅರ್ಜಿಗಳು ಮಂಡಳಿಯಲ್ಲಿ, ಕಾರ್ಮಿಕ ಇಲಾಖಾ ಕಛೇರಿಗಳು ಮತ್ತು ಕಾರ್ಮಿಕ ಸೇವಾ ಕೇಂದ್ರಗಳಲ್ಲಿ ಲಭ್ಯವಿರುತ್ತವೆ.
* ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ಕಛೇರಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಸಲ್ಲಿಸುವುದು.
* ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ತ್ರಿಪಕ್ಷೀಯ ಸಮಿತಿಯು ಪ್ರಶಸ್ತಿ ಹಾಗೂ ಪುರಸ್ಕಾರಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಪ್ರಶಸ್ತಿಗೆ ಅರ್ಹ ಕಾರ್ಮಿಕರನ್ನು ಆಯ್ಕೆ ಮಾಡಲಾಗುವುದು.









