ಬೆಂಗಳೂರು : ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸರ್ಕಾರವು ಕ್ರೀಡಾಪಟುಗಳಿಗೆ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ.
1. ಸಾಧಕ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ:
ಒಲಿಂಪಿಕ್ಸ್ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಗುಂಪು-ಎ ಹುದ್ದೆ ಮತ್ತು ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್ ಕಾಮನ್ವೆಲ್ತ್ ಗೇಮ್ಸ್ ಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ, ಗುಂಪು-ಬಿ ಮತ್ತು ಇತರೆ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗುತ್ತಿದೆ.
2 ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಸಾಧಕರಿಗೆ 3% ಮೀಸಲಾತಿ ಜಾರಿಗೊಳಿಸಲಾಗಿದೆ.
3. ‘ಗುರಿ:ಒಲಿಂಪಿಕ್ ಪದಕ’ ಯೋಜನೆ
ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳನ್ನು ಗುರುತಿಸಿ, 2028 ರ ಒಲಿಂಪಿಕ್ಸ್ ತಯಾರಿಗೆ ವಾರ್ಷಿಕ ತಲಾ ರೂ 10.00 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು.
4. ಕ್ರೀಡಾ ವಿದ್ಯಾರ್ಥಿವೇತನ:
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪದಕ ವಿಜೇತರಾದ ಹಾಗೂ ರಾಷ್ಟ್ರಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ 10,000 ವಿದ್ಯಾರ್ಥಿ ವೇತನ.
5. ಶೈಕ್ಷಣಿಕ ಶುಲ್ಕ ಮರುಪಾವತಿ:
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಾಂಪಿಯನ್ಷಿಪ್ಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ವಾರ್ಷಿಕ ಗರಿಷ್ಟರೂ 50,000/- ವರೆಗೆ ಶೈಕ್ಷಣಿಕ ಶುಲ್ಕ ಮರುಪಾವತಿ.
6. ಅತ್ಯುನ್ನತ ಕ್ರೀಡಾ ಸಾಧನೆಯತ್ತ ಮೊದಲ ಹೆಜ್ಜೆ; ಕ್ರೀಡಾ ವಸತಿ ಶಾಲೆ/ನಿಲಯ
ರಾಜ್ಯದಾದ್ಯಂತ 32 ಕ್ರೀಡಾ ವಸತಿ ನಿಲಯ ಹಾಗೂ 02 ಕ್ರೀಡಾ ವಸತಿ ಶಾಲೆಗಳಿದ್ದು, ವೈಜ್ಞಾನಿಕ ಕ್ರೀಡಾ ತರಬೇತಿ, ಉಚಿತ ಊಟೋಪಹಾರ, ವಸತಿ ಮತ್ತು ಕ್ರೀಡಾ ಸಮವಸ್ತ್ರ ಒದಗಿಸಲಾಗುತ್ತಿದೆ.
7. ನಮ್ಮೂರ ಶಾಲೆಗೆ ನಮ್ಮ ಯುವಜನರು:
ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳನ್ನು ರೂಪಿಸುವ ಸರ್ಕಾರಿ ಶಾಲೆಗಳನ್ನು ಪ್ರತಿ ಜಿಲ್ಲೆಗೆ ಒಂದರಂತೆ ಗುರುತಿಸಿ ಆಯ್ಕೆಯಾದ ಶಾಲೆಗೆ ಪ್ರೋತ್ಸಾಹವಾಗಿ ತಲಾ ರೂ 1.00 ಲಕ್ಷ ಪ್ರೋತ್ಸಾಹಧನ.
8. ಸಾಹಸ ಕ್ರೀಡೆಗಳು:
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಮೂಲಕ ಯುವಜನರಿಗೆ ಸಾಹಸ ಕ್ರೀಡಾ ಪ್ರಶಿಕ್ಷಕರಾಗಲು ವಿವಿಧ ಹಂತಗಳ ತರಬೇತಿಯನ್ನು ನೀಡಲಾಗುತ್ತಿದೆ.
2022 ಮತ್ತು 2023ರ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಹಾಗೂ 2023ರ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಸಮಾರಂಭ pic.twitter.com/3tKwrbgmmF
— DIPR Karnataka (@KarnatakaVarthe) December 1, 2025








