ಬೆಳಗಾವಿ : ಬೆಳಗಾವಿಯಲ್ಲಿ PHD ಪದವಿ ನೀಡದ ಆರೋಪ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಯನ್ನು ಸುಜಾತ ಬೆಂಡೆ (32) ಎಂದು ತಿಳಿದುಬಂದಿದೆ. ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಾಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ರಾಣಿ ಚೆನ್ನಮ್ಮ PHD ವಿದ್ಯಾರ್ಥಿನಿ ಸುಜಾತ ಅಸ್ವಸ್ಥ ವಿದ್ಯಾರ್ಥಿನಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶ್ವ ವಿದ್ಯಾಲಯ ಘಾಟಿಕೋತ್ಸವದಲ್ಲಿ PHD ಪದವಿ ಪ್ರದಾನ ಮಾಡದ ಆರೋಪ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಾಯದ ಕುಲಪತಿ ಸಿಎಂ ತ್ಯಾಗರಾಜ್ ಕುಲಸಚಿವ ಸಂತೋಷ ಕಾಮೇಗೌಡ, ಗೈಡ್, KLN ಮೂರ್ತಿ ವಿರುದ್ಧ ಆರೋಪ ಕೇಳಿಬಂದಿದೆ. ರಾಯಭಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ಸಂಶೋಧನೆ 6 ತಿಂಗಳ ಹಿಂದೆ ಸಲ್ಲಿಕೆ ಮಾಡಿದ್ದ PHD ವಿದ್ಯಾರ್ಥಿನಿ ಸುಜಾತ.
ಟಾರ್ಗೆಟ್ ಮಾಡಿ PHD ಪದವಿ ಕೊಡಲು ನಿರಾಕರಣೆ ಆರೋಪ ಕೇಳಿಬಂದಿದೆ. ಗೈಡ್ ಮೂರ್ತಿ ಕಿರುಕುಳ ಬಗ್ಗೆ ವಿಸಿ ಕುಲಸಚಿವರಿಗೆ ದೂರು ನೀಡಿದ್ದೆ. ದೂರು ನೀಡಿದ ನಂತರ ಸಮಸ್ಯೆ ಬಗೆಹರಿಸಲಾಗಿತ್ತು. ಈಗ ಟಾರ್ಗೆಟ್ ಮಾಡಿ ಪದವಿ ನೀಡ್ತಿಲ್ಲ ಎಂದು ಸುಜಾತ ಆರೋಪ ಮಾಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.








