ಮಂಡ್ಯ : ಎರಡುವರೆ ವರ್ಷಕ್ಕೆ ಸಿಎಂ ಬದಲಾವಣೆ ಬಗ್ಗೆ ಯಾರಿಗೂ ಗೊತ್ತಿಲ್ಲ ಸಿಎಂ ಬದಲಾವಣೆಯ ಬಗ್ಗೆ ಗೊತ್ತಿಲ್ಲ ಅಂದಮೇಲೆ ಆ ಕುರಿತು ಚರ್ಚೆ ಮಾಡುವ ಅವಶ್ಯಕತೆಯೇ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಬದ್ಧರಾಗಿರುತ್ತಾರೆ. ಶೀಘ್ರದಲ್ಲಿಯೇ ಎಲ್ಲದಕ್ಕೂ ಹೈಕಮಾಂಡ್ ತೆರೆ ಎಳೆಯುತ್ತಾರೆ ಎಂದು ಮಂಡ್ಯದಲ್ಲಿ ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತಿಂದ್ರ ಹೇಳಿಕೆ ನೀಡಿದರು.
ರಾಜ್ಯದಲ್ಲಿ ಯಾವುದೇ ಯುದ್ಧ ಅಥವಾ ಯಾವುದೇ ಘರ್ಷಣೆ ಇಲ್ಲ ಹೈಕಮಾಂಡ್ ಯಾವುದೇ ಸೂಚನೆ ಕೊಟ್ಟಿಲ್ಲ ಅವರು ಕರೆದು ಮಾತನಾಡುತ್ತಾರೆ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಕೆಲವರು ಮಾತನಾಡುತ್ತಿದ್ದಾರೆ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದೇವೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಹೈಕಮಾಂಡ್ ಮಾತಾಡಲಿದೆ ಅಲ್ಲಿಯವರಿಗೆ ಯಾವುದೇ ಗೊಂದಲ ಆಗಬಾರದು ನಮ್ಮ ಪಕ್ಷದಲ್ಲಿ ಯಾರು ಸಿಎಂ ಅನ್ನೋದನ್ನ ಹೈಕಮಾಂಡ್ ತಿರುಮನಿಸುತ್ತದೆ. ಹೊರಗಿನವರು ಯಾರು ಕಮೆಂಟ್ ಮಾಡುವ ಅಧಿಕಾರವಿಲ್ಲ ಎಂದು ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ರಾಜಕೀಯ ಶಕ್ತಿ ಇಲ್ಲದಿದ್ದರೆ ಸಮುದಾಯ ಮೇಲೆ ಬರಲು ಆಗಲ್ಲ. ಸಮುದಾಯ ಉದ್ಧಾರ ಮಾಡುವವರ ಹಿಂದೆ ನಿಂತು ಬೆಂಬಲಿಸಬೇಕು. ಹಿಂದುಳಿದ ವರ್ಗದವರು ಸಿಎಂ ಸಿದ್ದರಾಮಯ್ಯ ಪರವಾಗಿ ನಿಂತಿದ್ದೀರಿ, ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದಕ್ಕೆ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜಕೀಯ ಶಕ್ತಿ ಪಡೆದು ದಕ್ಕಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಸಿಎಂ ಸ್ಥಾನ ಪಡೆದುಕೊಂಡ ಮೇಲೆ ಅದನ್ನು ಉಳಿಸಿಕೊಳ್ಳುವುದು ಕಷ್ಟ.
ರಾಜ್ಯದಲ್ಲಿ ಇದುವರೆಗೆ 25 ನಾಯಕರು ಮುಖ್ಯಮಂತ್ರಿಗಳಾಗಿದ್ದಾರೆ. ಅದರಲ್ಲಿ ಹಿಂದುಳಿದ ವರ್ಗಗಳ ಐವರು ಮಾತ್ರ ಸಿಎಂ ಆಗಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ ದಲಿತರು ಸಿಎಂ ಆಗಿಲ್ಲ ದೇವರಾಜ್ ಅರಸು ಸಿದ್ದರಾಮಯ್ಯ ಮಾತ್ರ 5 ವರ್ಷ ಪೂರೈಸಿದ್ದಾರೆ. ಹಿಂದುಳಿದ ವರ್ಗದವರು ಸಣ್ಣ ತಪ್ಪು ಮಾಡಿದರು ದೊಡ್ಡದಾಗಿ ಬಿಂಬಿಸುತ್ತಾರೆ. ಇಲ್ಲದ ಹಗರಣ ಸೃಷ್ಟಿಸಿ ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ರಾಜಕೀಯ ಶಕ್ತಿ ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು ಡಾ. ಯತಿಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳುವ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ದೆಹಲಿಗೆ ತೆರಳುವ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರ ರಚನೆಯ ವೇಳೆ ಏನು ಮಾತುಕತೆ ನಡೆದಿದೆಯೋ ಮಾಹಿತಿ ಇಲ್ಲ. ಪಕ್ಷ ಅಂದಮೇಲೆ ಎಷ್ಟೋ ಜನರು ಸಿಎಂ ಪದವಿಗೆ ಆಕಾಂಕ್ಷಿ ಆಗಿರುತ್ತಾರೆ. ಅವರ ಕಡೆಯವರು ಕೇಳಿದ್ದಾರೆ ಅಷ್ಟೇ ಅದು ಏನು ದೊಡ್ಡ ವಿಷಯವಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಇದು ನಡೆದಿದೆ.
ಹೈಕಮಾಂಡ್ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬದ್ಧರಿದ್ದಾರೆ. ಆದಷ್ಟು ಬೇಗ ಗೊಂದಲ ನಿವಾರಣೆ ಆಗುತ್ತದೆ. ಹೈಕಮಾಂಡ್ ಎಲ್ಲದಕ್ಕೂ ತೆರೆ ಎಳೆಯುತ್ತಾರೆ. ಎರಡುವರೆ ವರ್ಷದ ನಂತರ ಬದಲಾವಣೆ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಯಾರೇ ಆದರೂ ಚರ್ಚೆ ಮಾಡುವ ಅಗತ್ಯವಿಲ್ಲ. ಯಾವ ಶಾಸಕರು ಯಾರ ಪರವಿದ್ದಾರೆ ಎನ್ನುವುದು ಪಕ್ಷದ ಆಂತರಿಕ ವಿಚಾರ ಎಂದು ಮಂಡ್ಯದಲ್ಲಿ ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.








