ಬೆಂಗಳೂರು : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕುರ್ಚಿ ಕಾದಾಟ ಜೋರಾಗಿ ನಡೆಯುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗ ಸಚಿವರು ಹಾಗೂ ಶಾಸಕರು ದೆಹಲಿಗೆ ಹೋಗುವುದು ಹೈಕಮಾಂಡವರನ್ನು ಭೇಟಿಯಾಗುವುದು, ನಾಯಕತ್ವ ಬದಲಾವಣೆ ಕುರಿತು ಚರ್ಚೆ ಮಾಡೋದು ಇದೆಲ್ಲ ಇವತ್ತಿನವರೆಗೂ ನಡೆಯುತ್ತಿದೆ.
ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರು ನನಗೆ ಏನೂ ಬೇಡ. ನನಗೇನು ಯಾವುದಕ್ಕೂ ಆತುರ ಇಲ್ಲ. ನನ್ನ ಪಕ್ಷ ಸಮಯಕ್ಕೆ ನಿರ್ಧಾರ ಮಾಡುತ್ತದೆ. ಒಂದು ಜಾತಿ ಆಧಾರದಲ್ಲಿ ನಾನು ಮಾತನಾಡುವುದಿಲ್ಲ. ಕಾಂಗ್ರೆಸ್ ಪಕ್ಷ ನನ್ನ ಕಮ್ಯುನಿಟಿ. ನನ್ನ ಪ್ರೀತಿ ಎಲ್ಲಾ ಸಮುದಾಯದ ಮೇಲೆ ಇದೆ ಒಕ್ಕಲಿಗರು ಹಿಂದುಳಿದ ಜಾತಿಯವರು ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದರು.
ಇನ್ನು ಮಾಧ್ಯಮದವರು ದೆಹಲಿಗೆ ಹೋಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ದೆಹಲಿ ನಮಗೆ ದೇವಸ್ಥಾನ ಇದ್ದಂತೆ ದೆಹಲಿಗೆ ನಾವು ಹೋಗೆ ಹೋಗುತ್ತೇವೆ . ನಮ್ಮ ಪಕ್ಷದ ವರಿಷ್ಠರು ಒಂದು ವೇಳೆ ಕರೆದರೆ ದೆಹಲಿಗೆ ನಾನು ಮತ್ತು ಸಿದ್ದರಾಮಯ್ಯ ಹೋಗೆ ಹೋಗುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.








