ಬೆಂಗಳೂರು : ಕರ್ನಾಟಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಕೂತಿದ್ದ ಚೇರ್ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಕುಳಿತುಕೊಂಡ ಪ್ರಸಂಗ ನಡೆಯಿತು.
ವೇದಿಕೆಯಿಂದ ಸಿಎಂ ಸಿದ್ದರಾಮಯ್ಯ ಕೆಲವು ಕಾಲ ಎದ್ದು ಹೊರ ಹೋಗಿದ್ದರು. ಸಿಎಂ ಸಿದ್ದರಾಮಯ್ಯ ಎದ್ದು ಹೋದ ಬಳಿಕ ಆ ಚೇರ್ ಮೇಲೆ ಕುಳಿತು ಡಿಸಿಎಂ ಡಿಕೆ ಶಿವಕುಮಾರ್ ಸಮಾಲೋಚನೆ ನಡೆಸಿದರು. ಮಾರ್ಗರೇಟ್ ಆಳ್ವ ಜೊತೆಗೆ ಶಿವಕುಮಾರ್ ಕೆಲ ಸಮ ಆಲೋಚನೆ ನಡೆಸಿದರು ಸಿಎಂ ಸಿದ್ದರಾಮಯ್ಯ ಕುಳಿತಿದ್ದ ಚೇರ್ನಲ್ಲಿ ಒಂದು ನಿಮಿಷ ಚರ್ಚೆ ನಡೆಸಿದ್ದಾರೆ ನಂತರ ತಾವು ಮೊದಲು ಕುಳಿತಿದ್ದ ಕುರ್ಚಿಗೆ ತೆರಳಿದರು ಅಷ್ಟರಲ್ಲಿ ಹೊರಹೋಗಿದ್ದ ಸಿಎಂ ಸಿದ್ದರಾಮಯ್ಯ ಮತ್ತೆ ಮರಳಿದರು.








