ಗದಗ : ಗದಗ ನಗರದ ಮುಳಗುಂದ ನಾಕಾ ಬಳಿ ದುರ್ಗಾ ಬಾರ್ ಸಮೀಪ ಸಿನಿಮೀಯ ರೀತಿಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಹಳೆ ದ್ವೇಷದಿಂದಾಗಿ ಅಭಿಷೇಕ್ ಹರ್ಲಾಪುರ, ಸಾಯಿಲ್ ಹಾಗೂ ಮುಷ್ತಾಕ್ ಮೂಲಿಮನಿ ಎಂಬುವರು ಅರುಣಕುಮಾರ ಕೋಟೆಗಲ್ ಮೇಲೆ ತಲ್ವಾರ್, ಚಾಕು ಹಾಗೂ ಬೀಯರ್ ಬಾಟಲ್‌ನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಯುವಕ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೌದು ತಡರಾತ್ರಿ ಈ ಒಂದು ಘಟನೆ ನಡೆದಿದ್ದು, ಇಲ್ಲಿನ ಮುಳಗುಂದ ನಾಕಾ ಬಳಿಯ ದುರ್ಗಾ ಬಾರ್ ಸಮೀಪ ಈ ಘಟನೆ ನಡೆದಿದ್ದು, ಅರುಣಕುಮಾರ ಕೋಟೆಗಲ್ ಎನ್ನುವ ಯುವಕ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಲ್ಲಾ ಓಣಿ ಮತ್ತು ಒಕ್ಕಲಿಗರ ಓಣಿಯ ಯುವಕರ ನಡುವೆ ಹಳೆಯ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರುಣಕುಮಾರ್ ಅವರು ಹೋಟೆಲ್ ಒಂದರಲ್ಲಿ ಊಟಕ್ಕೆ ಕುಳಿತಿದ್ದಾಗ, ಏಕಾಏಕಿ ಹೋಟೆಲ್‌ಗೆ ನುಗ್ಗಿದ ಅಭಿಷೇಕ್ ಹರ್ಲಾಪುರ, ಸಾಯಿಲ್ ಹಾಗೂ ಮುಷ್ತಾಕ್ ಮೂಲಿಮನಿ, ಅರುಣಕುಮಾರ್ ಮೇಲೆ ತಲ್ವಾರ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಹೊಟೆಲ್ ನಿಂದ ಹೊರ ಬಂದ ಬಳಿಕವೂ ಆತನ ಮೇಲೆ ಬೀಯರ್ ಬಾಟಲ್‌ನಿಂದ ತಲೆಗೆ ಬಲವಾಗಿ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಅರುಣಕುಮಾರ್ ದೇಹದ ಕತ್ತು, ಮುಖ, ತಲೆ, ಹೊಟ್ಟೆ, ಎದೆ, ಕೈ ಸೇರಿ ಹಲವು ಭಾಗಗಳಲ್ಲಿ ಚಾಕು ಇರಿತಗಳಾಗಿವೆ. ಹಲ್ಲೆ ಬಳಿಕ ಅರುಣಕುಮಾರ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾಸ್ಥಳಕ್ಕೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆದರು ಆದರೆ ಈ ಒಂದು ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.








