ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ಒಕ್ಕಲಿಗ ಮಠದ ಸ್ವಾಮೀಜಿಗಳು ಬ್ಯಾಟಿಂಗ್ ಮಾಡುತ್ತಿರುವ ವಿಚಾರವಾಗಿ ಸ್ವಾಮೀಜಿಗಳ ಮಧ್ಯಪ್ರವೇಶ ಸೂಕ್ತ ಅಲ್ಲ. ಸ್ವಾಮೀಜಿಗಳು ಧರ್ಮ ಸುಧಾರಣೆ ಕೆಲಸದಲ್ಲಿ ಇರಬೇಕು ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡುವುದು ಸೂಕ್ತವಲ್ಲ ಅಂದು ಶಾಸಕ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು.
ಹೈಕಮಾಂಡ್ ಕರೆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗುತ್ತಾರೆ. ಯಾವ ಉದ್ದೇಶದಿಂದ ಕರೆದಿದ್ದಾರೆ ಅನ್ನೋದು ಗೊತ್ತಾಗಬೇಕು. ಯಾರ್ಯಾರು ಮಾತು ಕೊಟ್ಟಿದಾರೆ ಅನ್ನೋದು ಗೊತ್ತಿಲ್ಲ. ನಮ್ಮ ತೀರ್ಮಾನ ಅಲ್ಲ ಹೈಕಮಾಂಡ್ ತೀರ್ಮಾನ ಅಂತಿಮ ಅಲ್ವಾ? ಪಕ್ಷದಲ್ಲಿ ನೋಟಿಸ್ ಕೊಡುವುದು ಉತ್ತರ ಕೊಡುವುದು ನಿರಂತರ ಪ್ರಕ್ರಿಯೆ. ಯಾವ್ಯಾವ ಸಂದರ್ಭದಲ್ಲಿ ಏನು ನಡೆಯಬೇಕು ಅದು ನಡೆದೇ ನಡೆಯುತ್ತದೆ. ಕಾಂಗ್ರೆಸ್ ನಲ್ಲಿ ಮಾತ್ರ ಅಲ್ಲ ಎಲ್ಲಾ ಪಕ್ಷಗಳಲ್ಲೂ ಅಹಿಂದ ಇದೆ ಎಂದು ಕಾಂಗ್ರೆಸ್ ಶಾಸಕ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು.








