ಬೆಂಗಳೂರು : ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಕರೆದರೆ ಹೋಗುತ್ತೇನೆ ಅಂತ ಮೂರ್ನಾಲ್ಕು ಬಾರಿ ಪುನರುಚ್ಚಿಸಿದರು. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಸಹ ಹೈಕಮಾಂಡ್ ಕರೆದರೆ ಸಿದ್ದರಾಮಯ್ಯ ಮತ್ತು ನಾನು ಇಬ್ಬರು ಮಾತನಾಡಿಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ಕರೆದರೆ ಸಿಎಂ ಹಾಗೂ ನಾನು ಇಬ್ಬರು ಮಾತನಾಡಿಕೊಂಡು ಹೋಗುತ್ತೇವೆ. ಹೈಕಮಾಂಡ್ ಕರೆ ಮಾಡಿದರೆ ದೆಹಲಿಗೆ ತೆರಳುತ್ತೇವೆ ಎಂದರು. ಇನ್ನು ಇಂದು ಬೆಳಿಗ್ಗೆ ಟ್ವೀಟ್ ನಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವುದು ವಿಶ್ವದ ದೊಡ್ಡ ಶಕ್ತಿ ಅಂತ ಪೋಸ್ಟ್ ಹಾಕಿರುವ ವಿಚಾರವಾಗಿ ಆ ಪೋಸ್ಟ್ ನಾನು ಹಾಕಿಲ್ಲ ಅದು ಫೇಕ್ ಎಂದು ಸ್ಪಷ್ಟಪಡಿಸಿದರು.








