Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 92,000 ಟನ್ LPG ಹೊತ್ತ ಭಾರತದ ‘ಶಿವಾಲಿಕ್’, ‘ನಂದಾ ದೇವಿ’ ಹಡಗುಗಳು ಸುರಕ್ಷಿತವಾಗಿ ‘ಹಾರ್ಮುಜ್ ಜಲಸಂಧಿ’ ದಾಟಿವೆ ; ಕೇಂದ್ರ ಸರ್ಕಾರ

14/03/2026 4:59 PM

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

14/03/2026 4:50 PM

BREAKING : ‘LPG ಪೂರೈಕೆ ಇನ್ನೂ ಕಳವಳಕಾರಿ, ಆದ್ರೆ ಚಿಲ್ಲರೆ ಅಂಗಡಿಗಳಲ್ಲಿ ಯಾವುದೇ ಕೊರತೆ ಇಲ್ಲ’ : ಕೇಂದ್ರ ಸರ್ಕಾರ

14/03/2026 4:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಲೋಕಾಯುಕ್ತ’ದಲ್ಲಿ ದೂರು ಸಲ್ಲಿಕೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
KARNATAKA

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಲೋಕಾಯುಕ್ತ’ದಲ್ಲಿ ದೂರು ಸಲ್ಲಿಕೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5727/11/2025 9:53 AM

ಬೆಂಗಳೂರು : ರಾಜ್ಯದ ಜನರೇ ಗಮನಿಸಿ, ಕರ್ನಾಟಕ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲು ವಿಧಾನ ಮತ್ತು ನಮೂನೆಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ದೂರನ್ನು ಹೇಗೆ ದಾಖಲಿಸಬೇಕು?

ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 ರ ಕಲಂ 9 ರ ಅಡಿಯಲ್ಲಿ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಅಥವಾ ಕರ್ನಾಟಕ ಲೋಕಾಯುಕ್ತ ಕಾಯಿದೆ 1984 ರ ಕಲಂ 2 (12) ರ ಅಡಿಯಲ್ಲಿ ಸಾರ್ವಜನಿಕ ನೌಕರರ ದುರ್ನಡತೆಯ ವಿರುದ್ಧ ದೂರನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಒಬ್ಬ ವ್ಯಕ್ತಿ ತನಗಾದ ಅನ್ಯಾಯದ ಅಥವಾ ದುರಾಡಳಿತದ ಪರಿಣಾಮವಾಗಿ ತನಗಾದ ಅನಗತ್ಯವಾದ ತೊಂದರೆಯನ್ನು ವ್ಯಕ್ತಪಡಿಸಿ ನ್ಯಾಯವನ್ನು ಅಪೇಕ್ಷಿಸುವುದನ್ನು “ಕುಂದುಕೊರತೆ” ಎಂದು ಅರ್ಥೈಸಲಾಗಿರುತ್ತದೆ. ಸಾರ್ವಜನಿಕ ನೌಕರನಿಂದಾಗುವ ದುರ್ನಡತೆಗೆ ಸಂಬಂಧಪಟ್ಟಿರುವುದನ್ನು “ಆಪಾದನೆ” ಎನ್ನಲಾಗುತ್ತದೆ. ಸರ್ಕಾರಿ ಅಶಿಸ್ತು, ಸರ್ಕಾರಿ ಹುದ್ದೆಯ ದುರುಪಯೋಗ, ಸರ್ಕಾರಿ ಕೆಲಸಗಳ ನಿರ್ವಹಣೆಯಲ್ಲಿ ವೈಯಕ್ತಿಕ ಲಾಭಗಳ ಅಪೇಕ್ಷೆ, ಭ್ರಷ್ಟಾಚಾರ, ಪಕ್ಷಪಾತ ಧೋರಣೆ, ಸ್ವಜನ ಪಕ್ಷಪಾತ, ಅಪ್ರಾಮಾಣಿಕತೆ, ಕರ್ತವ್ಯ ನಿರ್ವಹಣೆಯಲ್ಲಿ ಅಸಮರ್ಪಕತೆ ಅಥವಾ ದುರುದ್ದೇಶಗಳು, ಪ್ರಾಮಾಣಿಕತೆಯ ಮಾನದಂಡಗಳ ಪ್ರಕಾರ ಕಾರ್ಯನಿರ್ವಹಣೆಯಲ್ಲಿ ಲೋಪ, ಅವಿವೇಕ, ಅನ್ಯಾಯ, ದಬ್ಬಾಳಿಕೆಯ ಅಥವಾ ಅಸಮರ್ಪಕ ತಾರತಮ್ಯದ ಕಾರ್ಯಾಚರಣೆ, ಉದ್ದೇಶಪೂರ್ವಕ ನಿರ್ಲಕ್ಷ್ಯ, ಕ್ರಮ ತೆಗೆದುಕೊಳ್ಳಲು ಅನಾವಶ್ಯಕ ವಿಳಂಬ ಮಾಡುವುದು ಇತ್ಯಾದಿಗಳನ್ನು ಆಪಾದನೆ ಒಳಗೊಂಡಿರುತ್ತದೆ.

ಕರ್ನಾಟಕ ಲೋಕಾಯುಕ್ತ ನಿಯಮಾವಳಿಗಳು, 1985 ರ ನಿಯಮ 4 ರ ಪ್ರಕಾರ ಪ್ರತಿಯೊಂದು ದೂರನ್ನು ಅಧಿಕೃತ ಅಧಿಕಾರಿ ಅಥವಾ ನೋಟರಿಯ ಮುಂದೆ ಸಮರ್ಪಕವಾಗಿ ಪ್ರಮಾಣೀಕರಿಸಿದ ಶಪಥಪತ್ರ ಸಹಿತವಾದ ನಮೂನೆ 2 ರೊಡನೆ ಫಿರ್ಯಾದಿ ಸಹಿಮಾಡಿರುವ ನಮೂನೆ 1 ರಲ್ಲಿ ಸಲ್ಲಿಸಬೇಕು. ಆದ್ದರಿಂದ, ದೂರನ್ನು ಸಲ್ಲಿಸಬಯಸುವವರು ಈ ಜಾಲತಾಣದಿಂದ ನಮೂನೆ 1 ಮತ್ತು 2 ನ್ನು ಡೌನ್ ಲೋಡ್ ಮಾಡಿಕೊಂಡು ಅವುಗಳನ್ನು ಸೂಕ್ತವಾಗಿ ದೃಢೀಕರಿಸಿ ವಿವರವಾದ ದೂರು ಮತ್ತು ಯಾವುದಾದರೂ ಸಂಬಂಧಪಟ್ಟ ದಾಖಲಾತಿಗಳಿದ್ದರೆ ಅವುಗಳ ಸಹಿತವಾಗಿ ಬೆಂಗಳೂರು, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಮುಖ್ಯ ಕಛೇರಿಯಲ್ಲಿ ನೇರವಾಗಿ ದಾಖಲಿಸಿ ಈ ಜಾಲತಾಣದ ಶೀರ್ಷಿಕೆ “ದೂರಿನ ಸ್ಥಿತಿ” ಯ ಅಡಿಯಲ್ಲಿ ಸದರಿ ದೂರಿನ ಸ್ಥಿತಿಯನ್ನು ತಿಳಿಯಬಹುದು.

ದೂರನ್ನು ದಾಖಲಿಸಲು ಬೆಂಗಳೂರಿನಲ್ಲಿರುವ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಮುಖ್ಯ ಕಛೇರಿಗೆ ಅಥವಾ ಜಿಲ್ಲಾ ಲೋಕಾಯುಕ್ತ ಕಛೇರಿಗೆ ಫಿರ್ಯಾದಿ ಭೇಟಿ ನೀಡಿ ನಮೂನೆ 1 ಮತ್ತು 2 ರಲ್ಲಿ ದೂರನ್ನು ದಾಖಲಿಸಬಹುದು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ (ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ) ಪ್ರತಿಯೊಂದು ಜಿಲ್ಲಾ ಕಛೇರಿಗಳಲ್ಲಿ ಆರಕ್ಷಕ ನಿರೀಕ್ಷಕರ ಹುದ್ದೆ ಅಥವಾ ಅದಕ್ಕಿಂತ ಉನ್ನತ ಶ್ರೇಣಿಯ ಆರಕ್ಷಕ ಅಧಿಕಾರಿಗಳು ಪ್ರಮಾಣೀಕರಿಸಲು ಅಧಿಕಾರ ಹೊಂದಿದ್ದು ನಮೂನೆ 2 ರ ಶಪಥಪತ್ರವನ್ನು ದೃಢೀಕರಿಸುತ್ತಾರೆ. ಇದರೊಡನೆ, ಪೊಲೀಸ್ ಅಧಿಕಾರಿಗಳು ತಾಲ್ಲೂಕು ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಸಹ ನಮೂನೆ 1 ಮತ್ತು 2 ರಲ್ಲಿ ದೂರನ್ನು ಅವರಿಗೆ ಹಸ್ತಾಂತರಿಸಬಹುದು.

BIG NEWS: Attention to the people of the state: Here is complete information about filing a complaint with the `Karnataka Lokayukta'
Share. Facebook Twitter LinkedIn WhatsApp Email

Related Posts

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

14/03/2026 4:50 PM2 Mins Read

‘ಕುವೆಂಪು ವಿವಿ ಸಹ್ಯಾದ್ರಿ ಉತ್ಸವ’ದ ಅಂತಿಮ ಫಲಿತಾಂಶ ಪ್ರಕಟ: ಸಾಗರದ ‘ಇಂದಿರಾ ಗಾಂಧಿ ಕಾಲೇಜಿಗೆ ಸಮಗ್ರ ಪ್ರಶಸ್ತಿ’

14/03/2026 4:39 PM2 Mins Read

ಯುದ್ಧದ ಭೀತಿ: ಕರ್ನಾಟಕದಲ್ಲಿರುವ ವಿದೇಶಿ ಪ್ರವಾಸಿಗರ ನೆರವಿಗೆ ಧಾವಿಸಿದ ಸರ್ಕಾರ, ಹೆಲ್ಪ್‌ಲೈನ್ ಆರಂಭ

14/03/2026 4:25 PM1 Min Read
Recent News

BREAKING : 92,000 ಟನ್ LPG ಹೊತ್ತ ಭಾರತದ ‘ಶಿವಾಲಿಕ್’, ‘ನಂದಾ ದೇವಿ’ ಹಡಗುಗಳು ಸುರಕ್ಷಿತವಾಗಿ ‘ಹಾರ್ಮುಜ್ ಜಲಸಂಧಿ’ ದಾಟಿವೆ ; ಕೇಂದ್ರ ಸರ್ಕಾರ

14/03/2026 4:59 PM

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

14/03/2026 4:50 PM

BREAKING : ‘LPG ಪೂರೈಕೆ ಇನ್ನೂ ಕಳವಳಕಾರಿ, ಆದ್ರೆ ಚಿಲ್ಲರೆ ಅಂಗಡಿಗಳಲ್ಲಿ ಯಾವುದೇ ಕೊರತೆ ಇಲ್ಲ’ : ಕೇಂದ್ರ ಸರ್ಕಾರ

14/03/2026 4:44 PM

‘ಕುವೆಂಪು ವಿವಿ ಸಹ್ಯಾದ್ರಿ ಉತ್ಸವ’ದ ಅಂತಿಮ ಫಲಿತಾಂಶ ಪ್ರಕಟ: ಸಾಗರದ ‘ಇಂದಿರಾ ಗಾಂಧಿ ಕಾಲೇಜಿಗೆ ಸಮಗ್ರ ಪ್ರಶಸ್ತಿ’

14/03/2026 4:39 PM
State News
KARNATAKA

ಭಕ್ತರ ದಶಕಗಳ ಕನಸು ನನಸು; ಮಾ.30ರಂದು ಸೊರಬದ ಶ್ರೀರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ

By kannadanewsnow0914/03/2026 4:50 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸೊರಬ ಪಟ್ಟಣದ ಇತಿಹಾಸಪ್ರಸಿದ್ಧ ಶ್ರೀರಂಗನಾಥ ದೇವಸ್ಥಾನದ ನೂತನ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಾರ್ಚ್ 30ರಂದು ಅತ್ಯಂತ…

‘ಕುವೆಂಪು ವಿವಿ ಸಹ್ಯಾದ್ರಿ ಉತ್ಸವ’ದ ಅಂತಿಮ ಫಲಿತಾಂಶ ಪ್ರಕಟ: ಸಾಗರದ ‘ಇಂದಿರಾ ಗಾಂಧಿ ಕಾಲೇಜಿಗೆ ಸಮಗ್ರ ಪ್ರಶಸ್ತಿ’

14/03/2026 4:39 PM

ಯುದ್ಧದ ಭೀತಿ: ಕರ್ನಾಟಕದಲ್ಲಿರುವ ವಿದೇಶಿ ಪ್ರವಾಸಿಗರ ನೆರವಿಗೆ ಧಾವಿಸಿದ ಸರ್ಕಾರ, ಹೆಲ್ಪ್‌ಲೈನ್ ಆರಂಭ

14/03/2026 4:25 PM

150ಕ್ಕೂ ಹೆಚ್ಚು ಕಾಯಿಲೆಗಳಿಗೆ ರಾಮಬಾಣ ಈ ‘ಛಾಯಾ ಮಾನಸ’ ಸೊಪ್ಪು

14/03/2026 4:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.