ದಾವಣಗೆರೆ : ಪೋಕ್ಸೋ ಪ್ರಕರಣದ ಮೊದಲ ಕೇಸ್ನಲ್ಲಿ ಚಿತ್ರದುರ್ಗದ ಮುರುಘಾ ಶರಣರು ನಿರ್ದೋಷಿ ಎಂದು ಚಿತ್ರದುರ್ಗದ 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಈ ಒಂದು ಪ್ರಕರಣದಲ್ಲಿ ಮುರುಘ ಶ್ರೀಗಳು ನಿರ್ದೋಷಿ ಎಂದು ಮಹತ್ವದ ತೀರ್ಪು ನೀಡಿತು.
ಕೋರ್ಟ್ ನಿಂದ ನಿರ್ದೋಷಿ ಎಂದು ತೀರ್ಪು ಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುರುಘಾ ಶ್ರೀಗಳು, ಈ ವೇಳೆ ಎರಡನೇ ಪೋಕ್ಸೋ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ, ಈಗ ಉತ್ತರ ನೀಡುವುದಿಲ್ಲ. ಮುಂದೆ ನಿಮ್ಮೆಲ್ಲರನ್ನು ಇಲ್ಲಿ ಕರೆಯುತ್ತೇವೆ. ಆಗ ಉತ್ತರ ನೀಡಲಾಗುವುದು. ಇವತ್ತಿಗೆ ಇಷ್ಟು ಸಾಕು ಎಂದು ತಿಳಿಸಿದರು.
ಚಿತ್ರದುರ್ಗ ನ್ಯಾಯಾಲಯದಿಂದ ಖುಲಾಸೆಯಾದ ನಂತರ ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ಮುರುಘಾಶ್ರೀಗಳು ಆಗಮಿಸಿದರು. ಮುರುಘಾ ಶ್ರೀ ಅವರ ಬರುವಿಕೆಗೆ ಕಾಯುತ್ತಿದ್ದ ಭಕ್ತರು ಶ್ರೀಗಳು ಬರುತ್ತಿದ್ದಂತೆ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಮಂದಿರಕ್ಕೆ ಬಂದ ಬಳಿಕ ಜಯದೇವ ಜಗದ್ಗುರುಗಳ ಗದ್ದುಗೆಗೆ ಮುರುಘಾಶ್ರೀ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.








