ಶಿವಮೊಗ್ಗ: ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯವು ನಾಡಿಗೆ ಬೆಳಕು ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗೆ ಪ್ರಮುಖ ವಿದ್ಯುತ್ ಉತ್ಪಾದನೆ ಕೇಂದ್ರವಾಗಿರುವಂತ ಲಿಂಗನಮಕ್ಕಿಯ ಪವರ್ ಚಾನಲ್ ಗೆ ಹೆಚ್ಚುವರಿಯಾಗಿ ಕಟ್ಟಿದ್ದಂತ ಕಾಂಕ್ರೀಟ್ ತಡೆಗೋಡೆ ಕುಸಿತಗೊಂಡು ಆಂತಕಕ್ಕೆ ಕಾರಣವಾಗಿದೆ.
ಕಳಪೆ ಕಾಮಗಾರಿ ಎಫೆಕ್ಟ್, ಕೋಟಿ ಕೋಟಿ ಕಾಮಗಾರಿ 6 ತಿಂಗಳಲ್ಲೇ ಕುಸಿತ
ಹೌದು.ನಾಡಿಗೆ ಬೆಳಕು ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಸಾಗರ ತಾಲ್ಲೂಕಿನ ಕಾರ್ಗಲ್ ಬಳಿಯ ಲಿಂಗನಮಕ್ಕಿ ಜಲಾಶಯದ ಸ್ಲ್ಯೂಸ್ ಗೇಟ್ ಮುಂಭಾಗದಲ್ಲಿ ತಳಕಳಲೆ ಅಣೆಕಟ್ಟೆಗೆ ನೀರು ಹಾಯಿಸಲು ನಿರ್ಮಿಸಲಾಗಿರುವ ತಡೆಗೋಡೆ ನಿರ್ಮಿಸಲಾಗಿತ್ತು. ಲಿಂಗನಮಕ್ಕಿ ಪವರ್ ಚಾನಲ್ ಗೆ ಹೆಚ್ಚುವರಿಯಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾರ್ಯ ಕೈಗೊಳ್ಳಲು ರೂ 4.85 ಕೋಟಿ ವೆಚ್ಛದಲ್ಲಿ ಟೆಂಡರ್ ಕರೆಯಲಾಗಿತ್ತು. 2022 ರಲ್ಲಿ ದಾವುಲ್ ಸಾಬ್ ಕಮ್ಮಟಗಿ ಎಂಬ ಗುತ್ತಿಗೆದಾರರು ಸದರಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆಯ ಮೂಲಕ ಕೈಗೊಂಡಿದ್ದರು. ಎರಡೂ ದಂಡೆಯಲ್ಲಿ ನಿರ್ಮಿಸಿದ್ದ ಹೆಚ್ಚುವರಿ ಕಾಂಕ್ರೀಟ್ ತಡೆಗೋಡೆ ಕಾಮಗಾರಿ ಪೂರ್ಣಗೊಂಡ 6 ತಿಂಗಳೊಳಗೆ ಕುಸಿತ ಕಂಡಿತ್ತು.
ಬಹು ಕೋಟಿ ವೆಚ್ಛದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ತಡೆಗೋಡೆ ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೆ. ವಿಜಯಕುಮಾರ್ ಬೆಂಗಳೂರಿನ ಲೋಕಾಯುಕ್ತರ ಕಾರ್ಯಾಲಯದಲ್ಲಿ ದೂರು ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.
ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ, ಪರಿಶೀಲನೆ
ಈ ಹಿನ್ನೆಲೆಯಲ್ಲಿ ಖುದ್ದು ಸ್ಥಳ ಪರಿಶೀಲನೆ ನಡೆಸಲು ಲೋಕಾಯುಕ್ತ ಕಾರ್ಯಾಲಯದ ಮುಖ್ಯ ಎಂಜಿನಿಯರ್ ಕಛೇರಿಯ ಅಧಿಕಾರಿಗಳ ತಂಡ ಪರಮೇಶ್ ನೇತೃತ್ವದಲ್ಲಿ ಸೋಮವಾರ ಕಾರ್ಗಲ್ ಪಟ್ಟಣದಲ್ಲಿರುವ ಕೆಪಿಸಿ ಅಧೀಕ್ಷಕ ಎಂಜಿನಿಯರ್ ಕಛೇರಿಯಲ್ಲಿ ಕೆಪಿಸಿ ಅಧಿಕಾರಿಗಳ ಅಹವಾಲು ಮತ್ತು ದೂರುದಾರರ ಅಹವಾಲುಗಳನ್ನು ಕೇಳಿ ದಾಖಲಿಸಿದರು. ಮುಂದುವರಿದು ಕಳಪೆ ಕಾಮಗಾರಿ ನಡೆದಿದೆ ಎನ್ನಲಾದ ಲಿಂಗನಮಕ್ಕಿ ಜಲಾಶಯದ ಸ್ಲ್ಯೂಸ್ ಗೇಟ್ ಮುಂಭಾಗದಲ್ಲಿ ನುರಿತ ತಜ್ಞರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಅನಾಹುತಕ್ಕೂ ಮುನ್ನಾ ಎಚ್ಚೆತ್ತುಕೊಳ್ಳುವಂತೆ ಮನವಿ
ಅತಿ ಶೀಘ್ರದಲ್ಲಿ ಲಿಂಗನಮಕ್ಕಿ ಜಲಾಶಯದಿಂದ ಹೊರ ಹಾಯಿಸಲಾಗುತ್ತಿರುವ ನೀರನ್ನು ತಡೆದು ಸ್ಲ್ಯೂಸ್ ಗೇಟ್ ಮುಂಭಾಗದ ಪವರ್ ಚಾನಲ್ ತಳಭಾಗದಲ್ಲಿ ಆಗಿರಬಹುದಾದ ಅನಾಹುತಗಳನ್ನು ಪರಿಶೀಲನೆ ನಡೆಸಲು ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡ ಆಗಮಿಸಲಿದೆ ಎಂದು ದೂರುದಾರ ಕೆ. ವಿಜಯಕುಮಾರ್ ಮಾಹಿತಿ ನೀಡಿದರು.
BIG NEWS : ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ‘CM’ ಮಾಡುತ್ತೇವೆ : ಸಚಿವ ಕೆಜೆ ಜಾರ್ಜ್ ಹೇಳಿಕೆ








