ದಾವಣಗೆರೆ : ಮಕ್ಕಳನ್ನು ಒಂಟಿಯಾಗಿ ಬಿಡುವ ಪೋಷಕರೇ ಎಚ್ಚರ, ನೀರು ತುಂಬಿದ ಪಾತ್ರೆಯಲ್ಲಿ ಮುಳುಗಿ 2 ವರ್ಷದ ಮಗು ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಮನೆ ಹಿತ್ತಲಿನ ಬಚ್ಚಲ ಕೋಣೆಯಲ್ಲಿರುವ ನೀರು ತುಂಬಿದ ಪಾತ್ರೆಯಲ್ಲಿ ಮುಳುಗಿ ಎರಡು ವರ್ಷದ ಮಗು ಮೃತಪಟ್ಟಿದೆ.
ರಾಜೇಶ್ವರಿ ಮಂಜುನಾಥ್ ದಂಪತಿಯ ಮೂರನೇ ಮಗು ವೇದಾ ಮೃತ ಹೆಣ್ಣುಮಗು. ಮನೆಯ ಹಿತ್ತಲಿನಲ್ಲಿ ಇರಿಸಿದ್ದ ನೀರಿನ ಪಾತ್ರೆಯಲ್ಲಿ ಆಟವಾಡುತ್ತಾ ಮಗು ಬಿದ್ದು ಮೃತಪಟ್ಟಿದೆ.








